ಜಪಾನ್ ಸರ್ಕಾರ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ !

ಬುಧವಾರ, 24 ಆಗಸ್ಟ್ 2022 (09:00 IST)
ಟೋಕಿಯೋ : ಕೋವಿಡ್ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೊಸ ಅಭಿಯಾನ ಆರಂಭಿಸಿದೆ.

ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, “ಸೇಕ್ ವಿವಾ” ಎನ್ನುವ ಸ್ಪರ್ಧೆಯನ್ನು ಆರಂಭಿಸಿದೆ.

ರಾಷ್ಟ್ರೀಯ ತೆರಿಗೆ ಏಜೆನ್ಸಿ “ಸೇಕ್ ವಿವಾ!” ಎಂಬ ರಾಷ್ಟ್ರೀಯ ವ್ಯಾಪಾರ ಸ್ಪರ್ಧೆಯನ್ನು ಘೋಷಿಸಿದ್ದು, ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ.

ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ.

ಈ ಅಭಿಯಾನ ಮದ್ಯದ ಉದ್ಯಮವನ್ನು ಪುನಶ್ಚೇತನಗೊಳಿಸಲು ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಲಿದೆ ಎಂದು ಜಪಾನಿನ ತೆರಿಗೆ ಏಜೆನ್ಸಿ ಯೋಜನೆಯನ್ನು ವಿವರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ