ಕುಲಭೂಷಣ್ ಗೆ ಸುಮ್ಮನೇ ಗಲ್ಲು ಶಿಕ್ಷೆ ವಿಧಿಸಿಲ್ಲ ಎಂದ ಪಾಕ್

ಶನಿವಾರ, 15 ಏಪ್ರಿಲ್ 2017 (07:31 IST)
ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಸುಮ್ಮನೇ ಗಲ್ಲಿಗೇರಿಸುತ್ತಿಲ್ಲ. ಉಗ್ರರ ಪರ ಗೂಡಚರ ಎಂಬುದಕ್ಕೆ ಪುರಾವೆ ಸಿಕ್ಕಿದ್ದರಿಂದಲೇ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

 

 
ಕುಲಭೂಷಣ್ ವಿಚಾರದಲ್ಲಿ ಎಲ್ಲಾ ರೀತಿಯ ಸಾಕ್ಷ್ಯ ಸಂಗ್ರಹ ಮಾಡಿ ಸರಿಯಾದ ವಿಚಾರಣೆ ನಡೆಸಿದ ನಂತರವೇ ತೀರ್ಪು ನೀಡಲಾಗಿದೆ ಎಂದು ಪಾಕ್ ಪ್ರಧಾನಿಗಳ ಸಲಹೆಗಾರ ಸರ್ತರಾಜ್ ಅಝೀಜ್ ಹೇಳಿಕೊಂಡಿದ್ದಾರೆ.

 
ಪಾಕ್ ಆರೋಪಗಳು ಸುಳ್ಳು ಎನ್ನುತ್ತಿರುವ ಭಾರತದ ನಡೆಯನ್ನು ಖಂಡಿಸಿರುವ ಅವರು, ಒಂದು ವೇಳೆ ಆತ ನಿಷ್ಕಳಂಕ ಎಂದಾದಲ್ಲಿ ಯಾಕೆ ಹಿಂದೂವಾಗಿದ್ದುಕೊಂಡು ಮುಸ್ಲಿಂ ಹೆಸರಿಟ್ಟುಕೊಂಡು ಓಡಾಡಬೇಕಿತ್ತು? ಅಲ್ಲದೆ, ಅವರ ಬಳಿ ಎರಡೆರಡು ಪಾಸ್ ಪೋರ್ಟ್ ಯಾಕಿತ್ತು ಎಂದು ಅಝೀಜ್ ಪ್ರಶ್ನಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ