ಬಿಪಿ ಅಲ್ಲ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಇದೇ: ಡಾ ಸಿಎನ್ ಮಂಜುನಾಥ್

Krishnaveni K

ಮಂಗಳವಾರ, 8 ಜುಲೈ 2025 (08:40 IST)
ರಾಜ್ಯದಲ್ಲಿ ಈಗ ಹೃದಯಾಘಾತದ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ ಸಿಎನ್ ಮಂಜುನಾಥ್ ಹೃದಯದ ಖಾಯಿಲೆ ಹೆಚ್ಚಳಕ್ಕೆ ಕಾರಣ ಬಿಪಿ, ಶುಗರ್ ಗಿಂತ ದೊಡ್ಡದು ಯಾವುದು ಎಂದು ಹೇಳಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಹೃದಯದ ಖಾಯಿಲೆ ಹೆಚ್ಚಳಕ್ಕೆ ಕಾರಣವೇನೆಂದು ವಿವರಿಸಿದ್ದಾರೆ. ಕೊರೋನಾ ಬರುವುದಕ್ಕೆ ಮೊದಲೂ ಹೃದಯದ ಖಾಯಿಲೆ ಹೆಚ್ಚಾಗಲು ಆರಂಭವಾಗಿತ್ತು. 2013 ರಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಾಗಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಹೃದಯದ ಖಾಯಿಲೆ ಬರಲು ಬಿಪಿ, ಶುಗರ್, ಧೂಮಪಾನ, ಮದ್ಯಪಾನ ಕಾರಣ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಇವುಗಳು ಹೃದಯ ಖಾಯಿಲೆಗೆ ಕಾರಣವಾಗುವುದು ನಿಜ. ಆದರೆ ಅದೆಲ್ಲದಕ್ಕಿಂತ ದೊಡ್ಡ ಶತ್ರು ನಮ್ಮಲ್ಲಿದೆ.

ಅದುವೇ ಒತ್ತಡ. ಇತ್ತೀಚೆಗಿನ ಕೆಲವು ವರ್ಷಗಳಿಂದ ಜನರ ಜೀವನ ಶೈಲಿಯೇ ಹೀಗಾಗಿದೆ. ಅನೇಕರು ನಾನಾ ರೀತಿಯ ಕಾರಣಗಳಿಗೆ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಸೋಮಾರಿತನ ಮೈಗೂಡಿಸಿದ್ದಾರೆ. ಇದೇ ಕಾರಣಕ್ಕೆ ಹೃದಯದ ಖಾಯಿಲೆಗಳೂ ಹೆಚ್ಚಾಗುತ್ತಿವೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಬೇಕು. ಪ್ರತಿನಿತ್ಯ ನಡೆದಾಡುವ, ಮನಸ್ಸಿನ ಒತ್ತಡ ಕಡಿಮೆ ಮಾಡುವ ಚಟುವಟಿಕೆಗಳನ್ನು ಮಾಡಬೇಕು ಎಂದು ಅವರು ಸಲಹೆ ಕೊಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ