ಇಶಿಯಾ ದ್ವೀಪದಲ್ಲಿ ಭೂಕುಸಿತ : 3 ವಾರದ ಶಿಶು ಸೇರಿ 7 ಸಾವು!
ಇಶಿಯಾ ದ್ವೀಪದ ಉತ್ತರ ಭಾಗದಲ್ಲಿರುವ ಕ್ಯಾಂಪನಿಯಾದ ಮೆಟ್ರೋಪಾಲಿಟನ್ ಸಿಟಿ ಆಫ್ ನೇಪಲ್ಸ್ನಲ್ಲಿರುವ ಕಮ್ಯೂನ್ ಕ್ಯಾಸಮಿಸಿಯೋಲಾದಲ್ಲಿ ಭೂಕುಸಿತ ಉಂಟಾಗಿದ್ದು,
ಹಲವರು ಇನ್ನೂ ಅವಶೇಷಗಳಡಿ ಸಿಲುಕಿರುವುದಾಗಿ ಶಂಕಿಸಲಾಗಿದೆ. ಈಗಾಗಲೇ 3 ವಾರದ ಮಗು, ಒಂದು ಜೋಡಿ ಒಡಹುಟ್ಟಿದ ಮಕ್ಕಳು ಸೇರಿದಂತೆ 7 ಜನರ ಶವಗಳನ್ನು ಹೊರತೆಗೆಯಲಾಗಿದೆ.
ಭಾರೀ ಭೂಕುಸಿತದಿಂದಾಗಿ ಅನೇಕ ಕಟ್ಟಡಗಳು ಕುಸಿದಿದ್ದು, ಹಲವು ವಾಹನಗಳು ಸಮುದ್ರ ಪಾಲಾಗಿದೆ ಎಂದು ವರದಿಗಳು ತಿಳಿಸಿವೆ.