ವಾಲ್ಮಾರ್ಟ್ನಲ್ಲಿ ಗುಂಡಿನ ಸುರಿಮಳೆ! 10ಕ್ಕೂ ಹೆಚ್ಚು ಮಂದಿ ಸಾವು

ಗುರುವಾರ, 24 ನವೆಂಬರ್ 2022 (09:31 IST)
ವಾಷಿಂಗ್ಟನ್ : ಅಮೆರಿಕದ ವರ್ಜೀನಿಯಾದ ಚೆಸಾಪೀಕ್ನಲ್ಲಿರುವ ವಾಲ್ಮಾರ್ಟ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆಸಾಪೀಕ್ನ ಸ್ಯಾಮ್ಸ್ ವೃತ್ತದಲ್ಲಿರುವ ವಾಲ್ಮಾರ್ಟ್ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಆದರೆ ಮೃತಪಟ್ಟವರ ಸಂಖ್ಯೆ ಹಾಗೂ ಗಾಯಗೊಂಡವರ ಸಂಖ್ಯೆ ಎಷ್ಟೆಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಾಲ್ಮಾರ್ಟ್ ಉದ್ಯೋಗಿಯೇ ಶೂಟರ್ ಆಗಿದ್ದ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ