ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ : ಶೆಹಬಾಜ್ ಷರೀಫ್
ಭಾನುವಾರ, 10 ಏಪ್ರಿಲ್ 2022 (09:46 IST)
ಇಸ್ಲಾಮಾಬಾದ್ : ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದ್ದು,
ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲು ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಮುಖ್ಯಸ್ಥ ಶೆಹಬಾಜ್ ಷರೀಫ್ ಸಿದ್ಧರಾಗಿದ್ದಾರೆ.
ಇಮ್ರಾನ್ ಖಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ ನಂತರ ಶೆಹಬಾಜ್ ಷರೀಫ್ ಅವರು ರಾಷ್ಟ್ರವನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಕಳೆದ ರಾತ್ರಿ ನಡೆದ ಹೈಡ್ರಾಮಾದ ನಂತರ ಪಾಕಿಸ್ತಾನವು ಗಂಭೀರ ಬಿಕ್ಕಟ್ಟಿನಿಂದ ಹೊರಬಂದಿದೆ. ಹೊಸ ಉದಯಕ್ಕೆ ಪಾಕಿಸ್ತಾನಿ ರಾಷ್ಟ್ರಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಹೊಸ ಸರ್ಕಾರದ ಅಡಿಯಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಯಾವುದೇ ಪ್ರತೀಕಾರ ತೀರಿಸಿಕೊಳ್ಳಲ್ಲ ಎಂದು ಭರವಸೆ ನೀಡಿದ ಅವರು, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ, ಯಾರಿಗೂ ಅನ್ಯಾಯ ಮಾಡುವುದಿಲ್ಲ ಮತ್ತು ಯಾರನ್ನೂ ಜೈಲಿಗೆ ಹಾಕುವುದಿಲ್ಲ, ಕಾನೂನು ತನ್ನದೇ ದಾರಿ ಹಿಡಿಯುತ್ತದೆ ಎಂದರು.