ಭಾರತದ ಬಹಿಷ್ಕಾರ ಅಭಿಯಾನಕ್ಕೆ ಬೆಚ್ಚಿದ ಮಾಲ್ಡೀವ್ಸ್ ಸರ್ಕಾರ ಮಾಡಿದ್ದೇನು?

Krishnaveni K

ಸೋಮವಾರ, 8 ಜನವರಿ 2024 (10:01 IST)
ನವದೆಹಲಿ: ಭಾರತೀಯರು ನಡೆಸಿದ ಮಾಲ್ಡೀವ್ಸ್ ಬಹಿಷ್ಕಾರಕ್ಕೆ ಅಲ್ಲಿನ ಸರ್ಕಾರ ಬೆಚ್ಚಿಬಿದ್ದಿದ್ದು, ವಿವಾದದಿಂದ ದೂರವಿರುವ ಪ್ರಯತ್ನ ಮಾಡಿದೆ.

ಪ್ರಧಾನಿ ಮೋದಿ ಲಕ್ಷದ್ವೀಪದ ಕಡಲತಡಿಯಲ್ಲಿರುವ ಫೋಟೋ ಪ್ರಕಟಿಸಿದ ಬಳಿಕ ತಮ್ಮ ದೇಶದ  ಪ್ರವಾಸೋದ್ಯಮಕ್ಕೆ ಎಲ್ಲಿ ಪೆಟ್ಟು ಬೀಳುತ್ತದೋ ಎಂಬ ಹೊಟ್ಟೆ ಉರಿಗೆ ಅಲ್ಲಿನ ಸಚಿವೆ ಮಾರಿಯಂ ಶೂನಾ ಮೋದಿ ಮತ್ತು ಭಾರತದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಹೇಳಿಕೆ ನೀಡಿದ್ದರು.

ಇದರಿಂದ ಸಿಟ್ಟಗೆದ್ದ ಭಾರತೀಯರು ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಮಾಲ್ಡೀವ್ಸ್ ಬಹಿಷ್ಕರಿಸಿ ಅಭಿಯಾನ ಆರಂಭಿಸಿದ್ದರು. ಅಲ್ಲದೆ, ಎಷ್ಟೋ ಮಂದಿ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಲು ಇದು ಕಾರಣವಾಗಿದೆ.

ಇದರಿಂದ ಎಚ್ಚೆತ್ತುಕೊಂಡ ಮಾಲ್ಡೀವ್ಸ್ ಸರ್ಕಾರ ಈಗ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಸಚಿವರ ಬಾಲಿಷ ಹೇಳಿಕೆ ವಿಷಾಧನೀಯ. ಆದರೆ ಇದು ಅವರ ವೈಯಕ್ತಿಕ ಅಭಿಪ್ರಾಯ. ಮಾಲ್ಡೀವ್ಸ್ ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿವೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡು ವಿವಾದಕ್ಕೆ ತೇಪೆ ಹಾಕುವ ಯತ್ನ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ