ನವದೆಹಲಿ: ಭಾರತವನ್ನು ಕಡೆಗಣಿಸಿ ಚೀನಾ ಬಾಲ ಹಿಡಿದಿದ್ದ ಮಾಲ್ಡೀವ್ಸ್ ಗೆ ಭಾರತದ ಪ್ರಧಾನಿ ಮೋದಿ ಸೂಕ್ತವಾಗಿ ಠಕ್ಕರ್ ಕೊಟ್ಟಿದ್ದಾರೆ. ಇದರ ಪರಿಣಾಮ ಭಾರತದಿಂದ ಮಾಲ್ಡೀವ್ಸ್ ಗೆ ತೆರಳಬೇಕಿದ್ದ ಎಷ್ಟೋ ಜನರು ಪ್ರವಾಸ ಕ್ಯಾನ್ಸಲ್ ಮಾಡಿ ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ.
ಮಾಲ್ಡೀವ್ಸ್ ಇತ್ತೀಚೆಗೆ ಭಾರತೀಯ ಸೈನಿಕರನ್ನು ತನ್ನ ದೇಶದಿಂದ ಹೊರಹೋಗುವಂತೆ ಸೂಚಿಸಿತ್ತು. ಇದರ ಹಿಂದೆ ಚೀನಾ ಕುಮ್ಮಕ್ಕು ಇದೆಯೆಂಬ ಗುಮಾನಿಯಿತ್ತು. ಇದರ ಜೊತೆಗೆ ಚೀನಾ ಜೊತೆಗೆ ದ್ವೀಪ ರಾಷ್ಟ್ರದ ಸಖ್ಯ ಜೋರಾಗಿಯೇ ಇತ್ತು.
ಹೀಗಾಗಿ ಮಾಲ್ಡೀವ್ಸ್ ಸೊಕ್ಕು ಮುರಿಯಲು ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ, ಕಡಲ ತೀರದಲ್ಲಿ ಪ್ರವಾಸ ಮಾಡಲು ಇರುವ ಅವಕಾಶದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಹಲವಾರು ಮಂದಿ ಮಾಲ್ಡೀವ್ಸ್ ಗೆ ತೆರಳುವ ಯೋಜನೆ ಬಿಟ್ಟು ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ.
ಭಾರತೀಯರ ಈ ಒಂದು ನಡೆಯಿಂದ ಪ್ರವಾಸೋಧ್ಯಮವನ್ನೇ ಆದಾಯವಾಗಿ ನಂಬಿಕೊಂಡಿರುವ ಆ ರಾಷ್ಟ್ರದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಲವಾರು ಮಂದಿ ಈಗಾಗಲೇ ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿ ಲಕ್ಷದ್ವೀಪಕ್ಕೆ ತೆರಳಲು ಯೋಜನೆ ಹಾಕಿಕೊಂಡಿರುವುದಾಗಿ ವರದಿಯಾಗಿದೆ. ಗೂಗಲ್ ನಲ್ಲೂ ಅತೀ ಹೆಚ್ಚು ಮಂದಿ ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುತ್ತಿದ್ದಾರೆ. ಈ ಮೂಲಕ ಮೋದಿಯ ಒಂದು ಫೋಟೋ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ.