ಒಳ ಉಡುಪುಗಳನ್ನು ಕದ್ದು ಪೊಲೀಸರ ಅತಿಥಿಯಾದ ಭೂಪ

ಬುಧವಾರ, 8 ಸೆಪ್ಟಂಬರ್ 2021 (10:23 IST)
ಟೋಕಿಯೋ: ಮಹಿಳೆಯರ ಒಳ ಉಡುಪುಗಳನ್ನು ಕದ್ದು ಇಲ್ಲೊಬ್ಬ ಭೂಪ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಇದು ನಡೆದಿರುವುದು ಜಪಾನ್ ದೇಶದಲ್ಲಿ.


56 ವರ್ಷದ ಆರೋಪಿಯ ಮನೆಗೆ ರೈಡ್ ಮಾಡಿದ ಪೊಲೀಸರೇ ಈತನ ಮನೆಯಲ್ಲಿದ್ದ ಒಳ ಉಡುಪುಗಳ ಸಂಖ್ಯೆ ನೋಡಿ ಬೆಚ್ಚಿಬಿದ್ದಿದ್ದಾರೆ. ಲಾಂಡ್ರಿ ಒಂದರಿಂದ ಕದ್ದ ಸುಮಾರು 700 ಕ್ಕೂ ಹೆಚ್ಚು ಮಹಿಳೆಯರ ಒಳ ಉಡುಪುಗಳು ಈತನ ಮನೆಯಲ್ಲಿ ಪತ್ತೆಯಾಗಿದೆಯಂತೆ.

ಈ ಬಗ್ಗೆ ವಿಚಾರಿಸಿದಾಗ ಇದು ಆರೋಪಿಯ ವಿಚಿತ್ರ ಹವ್ಯಾಸವಾಗಿತ್ತು ಎಂದು ತಿಳಿದುಬಂದಿದೆಯಂತೆ. ಉಡುಪು ಕಾಣೆಯಾಗುತ್ತಿದ್ದರಿಂದ ಬೇಸತ್ತ ಲಾಂಡ್ರಿಯವರು ಸಿಸಿಟಿವಿ ಕ್ಯಾಮರಾ ಫಿಕ್ಸ್ ಮಾಡಿದ್ದರಂತೆ. ಇದರಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ