ಡಿಸ್ನಿ ಲ್ಯಾಂಡ್ ಎದುರು ಪ್ರಪೋಸಲ್ ಮಾಡಲು ಹೊರಟ ಯುವಕ: ಕೊನೆಗೆ ಆಗಿದ್ದೇನು?!

ಗುರುವಾರ, 9 ಜೂನ್ 2022 (09:30 IST)
ನವದೆಹಲಿ: ತಾನು ಮೆಚ್ಚಿದ ಹುಡುಗಿಗೆ ವಿಶೇಷವಾಗಿ ಪ್ರಪೋಸ್ ಮಾಡಬೇಕೆಂಬುದು ಎಲ್ಲಾ ಹುಡುಗರ ಬಯಕೆಯಾಗಿರುತ್ತದೆ. ಅಂತೆಯೇ ಇಲ್ಲೊಬ್ಬ ಯುವಕ ಪ್ಯಾರಿಸ್ ನ ಡಿಸ್ನಿ ಲ್ಯಾಂಡ್ ಪಾರ್ಕ್ ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಲು ಹೊರಟಿದ್ದ. ಆದರೆ ಕೊನೆಗೆ ಆಗಿದ್ದೇ ಬೇರೆ.

ಸ್ಲೀಪ್ ಕಾಸ್ಟಲ್ ಎದುರು ಯುವಕ ತನ್ನ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಲು ಡಿಸ್ನಿ ಲ್ಯಾಂಡ್ ನ ಒಪ್ಪಿಗೆಯನ್ನೂ ಪಡೆದಿದ್ದ. ಇದೇ ಖುಷಿಯಲ್ಲಿ ಆತ ಇನ್ನೇನು ಹುಡುಗಿಗೆ ರಿಂಗ್ ತೊಡಿಸಬೇಕು ಎನ್ನುವಷ್ಟರಲ್ಲಿ ಡಿಸ್ನಿ ಲ್ಯಾಂಡ್ ನ ಸಿಬ್ಬಂದಿಯೊಬ್ಬರು ಬಂದು ಆತನ ಕೈಯಿಂದ ರಿಂಗ್ ಕಸಿದು ಅಲ್ಲಿಂದ ಕಳುಹಿಸಿದ್ದಾರೆ.

ಈ ವಿಡಿಯೋವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಂತೇ ಡಿಸ್ನಿ ಲ್ಯಾಂಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಈಗ ಡಿಸ್ನಿ ಲ್ಯಾಂಡ್ ಯುವ ಜೋಡಿಗೆ ಆದ ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ