ಮಸೂದ್ ಅಜರ್ ಜಾಗತಿಕ ಉಗ್ರ: ಅಜರ್ ಗತಿ ಮುಂದೇನಾಗುತ್ತೆ ಗೊತ್ತಾ?
ಗುರುವಾರ, 2 ಮೇ 2019 (08:16 IST)
ನವದೆಹಲಿ: ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆಗೊಳಿಸಿರುವುದು ಭಾರತದ ಪಾಲಿಗೆ ದೊಡ್ಡ ರಾಜತಾಂತ್ರಿಕ ಗೆಲುವೇ ಸರಿ.
ಈ ಉಗ್ರ ನಾಯಕ ಜಾಗತಿಕ ಉಗ್ರ ಪಟ್ಟಿಗೆ ಸೇರಿದರೆ ಅದರ ಪರಿಣಾಮಗಳು ಏನಿರುತ್ತದೆ? ಆತ ಮತ್ತು ಆತನ ಸಂಘಟನೆಯ ಗತಿ ಏನಾಗುತ್ತದೆ ಎಂದು ಗೊತ್ತಾ?
ವಿಶ್ವಸಂಸ್ಥೆಯ ನಿಯಮದ ಪ್ರಕಾರ ಜಾಗತಿಕ ಉಗ್ರ ಪಟ್ಟಿಗೆ ಸೇರಿದ ವ್ಯಕ್ತಿ ಎಲ್ಲಿ ಬೇಕೆಂದರಲ್ಲಿ ಫ್ರೀಯಾಗಿ ಓಡಾಡುವಂತಿಲ್ಲ. ಆತನ ಪ್ರಯಾಣಕ್ಕೆ ಕೆಲವು ನಿಬಂಧನೆಗಳಿರುತ್ತವೆ. ಅಷ್ಟೇ ಅಲ್ಲ, ಆತನ ಹಣಕಾಸಿನ ಮೂಲ, ಆಸ್ತಿ ಪಾಸ್ತಿ ತನಿಖೆ ಮಾಡಿ ಸೀಝ್ ಮಾಡಲಾಗುತ್ತದೆ.
ಮುಖ್ಯವಾಗಿ ಇನ್ನು ಮುಂದೆ ಅಝರ್ ಗೆ ಯಾವುದೇ ವ್ಯಕ್ತಿ ಅಥವಾ ದೇಶ ಶಸ್ತ್ರಾಸ್ತ್ರ ಮಾರಾಟ ಮಾಡುವಂತಿಲ್ಲ. ಅಷ್ಟೇ ಅಲ್ಲದೆ, ಆತನ ಸಂಘಟನೆ, ಅದರ ಶಾಖೆಗಳ ಮೇಲೆ ದಾಳಿ ನಡೆಯುತ್ತದೆ. ಇದು ವಿಶ್ವಸಂಸ್ಥೆಯ ಎಲ್ಲಾ ಅಂಗರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಯಾವುದೇ ಅಂಗ ರಾಷ್ಟ್ರಗಳಲ್ಲೂ ಆತನ ಆಟ ನಡೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ