ಚಂಡುಮಾರುತ: ಅಮೆರಿಕದಲ್ಲಿ 300 ಕ್ಕೂ ಹೆಚ್ಚು ಜನರ ಸಾವು

ಶುಕ್ರವಾರ, 7 ಅಕ್ಟೋಬರ್ 2016 (14:14 IST)
ಅಮೆರಿಕದಲ್ಲಿ ಎದುರಾಗಿರುವ ಚಂಡುಮಾರುತಕ್ಕೆ 300 ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿರುವ ದಾರುಣ ಗಟನೆ ವರದಿಯಾಗಿದೆ. 
 
ಕಳೆದ ಒಂದು ದಶಕದಲ್ಲಿಯೇ ಮೊದಲ ಬಾರಿ ಭಾರಿ ಅನಾಹುತ ಸೃಷ್ಟಿಸಿರುವ ಮ್ಯಾಥ್ಯು ಚಂಡುಮಾರುತ, ಸೌತ್ ಕ್ಯಾರೋಲಿನಾ ಮತ್ತು ಫ್ಲೋರಿಡಾದಲ್ಲಿ ಭಾರಿ ನಷ್ಟ ಉಂಟು ಮಾಡಿದೆ.
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಚಂಡುಮಾರುತವಿರುವ ಪ್ರದೇಶಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಪರಿಹಾರ ತಂಡಗಳು ಕೂಡಾ ಸ್ಥಳಕ್ಕೆ ಧಾವಿಸಿದ್ದರೂ ಪ್ರಕೃತಿಯ ವಿಕೋಪದಿಂದಾಗಿ ಹೆಚ್ಚಿನ ನೆರವು ಒದಗಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
 
2007ರಲ್ಲಿ ಕೆರಿಬಿಯನ್‍ನಲ್ಲಿ ಈ ದೈತ್ಯ ಮ್ಯಾಥ್ಯೂ ಚಂಡಮಾರುತ ಬೀಸಿತ್ತು. ಗಂಟೆಗೆ ಸುಮಾರು 230 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಫ್ಲೋರಿಡಾ, ಜಾರ್ಜಿಯಾ ಹಾಗೂ ಸೌತ್ ಕ್ಯಾರೊಲಿನಾದಲ್ಲಿ ಲಕ್ಷಾಂತರ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
 
ಹೈಟಿಯಲ್ಲಿ ಚಂಡಮಾರುತದಿಂದ ಸಂಭವಿಸಿರುವ ದುರಂತದಿಂದಾಗಿ ಭಾನುವಾರದಂದು ಇಲ್ಲಿ ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗಿದೆ. ಬುಧವಾರದಿಂದ ಶನಿವಾರದವರೆಗೆ ನಿಗದಿಯಾಗಿದ್ದ ಸುಮಾರು 3862 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ