ಡೊನಾಲ್ಡ್ ಟ್ರಂಪ್ ಗೆ ಅಧ್ಯಕ್ಷ ಪಟ್ಟವೂ ಹೋಯ್ತು, ಈಗ ಪತ್ನಿಯೂ?!

ಸೋಮವಾರ, 9 ನವೆಂಬರ್ 2020 (09:47 IST)
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಿರಾಶೆಯಲ್ಲಿರುವ ಡೊನಾಲ್ಡ್ ಟ್ರಂಪ್ ಗೆ ಈಗ ಪತ್ನಿ ಮೆಲಾನಿಯಾ ಕೂಡಾ ಕೈಕೊಡಲು ಸಿದ್ಧತೆ ನಡೆಸಿದ್ದಾರಂತೆ.

 

ಟ್ರಂಪ್ ಪತ್ನಿ ಮೆಲಾನಿಯಾ ಕೂಡಾ ತಮ್ಮ ಪತಿಗೆ ವಿಚ್ಛೇದನ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ. ಮೊದಲಿನಿಂದಲೂ ಮೆಲಾನಿಯಾಗೆ ಟ್ರಂಪ್ ಕಂಡರೆ ಅಷ್ಟಕ್ಕಷ್ಟೇ. ಆದರೆ ಟ್ರಂಪ್ ಅಧಿಕಾರದಲ್ಲಿದ್ದರಿಂದ ಆಗ ವಿಚ್ಛೇದನ ನೀಡಿದ್ದರೆ ತನ್ನ ಮೇಲೆ ಅಧಿಕಾರ ಬಳಸಿ ತೊಂದರೆ ಕೊಡಬಹುದು ಎಂದು ಮೆಲಾನಿಯಾ ಸುಮ್ಮನಾಗಿದ್ದರು ಎನ್ನಲಾಗಿದೆ. ಈಗ ಅಧ್ಯಕ್ಷ ಪದವಿ ಹೋಗುತ್ತಿದ್ದಂತೇ ಮೆಲಾನಿಯಾ ಕೂಡಾ ಟ್ರಂಪ್ ಗೆ ವಿಚ್ಛೇದನ ಕೊಡಲು ಸಿದ್ಧತೆ ನಡೆಸಿದ್ದಾರಂತೆ. ಅಂತೂ ಅತ್ತ ಅಧಿಕಾರದ ಜತೆಗೆ ವೈಯಕ್ತಿಕ ಬದುಕಿನಲ್ಲೂ ಟ್ರಂಪ್ ಸಂಕಷ್ಟದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ