ಖಗೋಳ ವಿಸ್ಮಯ: ಸೂರ್ಯನ ಎದುರು ಹಾದುಹೋಗುವ ಬುಧ

ಶನಿವಾರ, 7 ಮೇ 2016 (11:16 IST)
ಇದು ಒಂದು ಶತಮಾನದಲ್ಲಿ ಸುಮಾರು 13 ಬಾರಿ ಸಂಭವಿಸುತ್ತದೆ. ಸೌರ ಮಂಡಲದ ಅತೀ ಸಣ್ಣ ಗ್ರಹ ಬುಧ ಸೂರ್ಯನ ಎದುರು ಹಾದುಹೋಗುವ ಅಪೂರ್ವ ವಿದ್ಯಮಾನ ಮೇ 9ರಂದು ಸೋಮವಾರ ಗೋಚರಿಸಲಿದೆ. ಇದನ್ನು ಬುಧ ಸಂಕ್ರಮಣ ಎಂದು ಕರೆಯಲಾಗುತ್ತದೆ. ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ, ಬುಧ ಗ್ರಹವು ಸಣ್ಣ ಕಪ್ಪು ಚುಕ್ಕೆಯಾಗಿ ಸೂರ್ಯನ ಎದುರು ಹಾದುಹೋಗುವುದು ಕಂಡುಬರಲಿದೆ.

ನಿಮ್ಮ ಬಳಿಕ ದೂರದರ್ಶಕವಿದ್ದರೆ ನೀವು ಸುರಕ್ಷತಾ ಫಿಲ್ಟರ್ ಬಳಸಿ ಈ ವಿದ್ಯಮಾನ ವೀಕ್ಷಿಸಬಹುದು. ನಿಮ್ಮ ಬಳಿ ಫಿಲ್ಟರ್ ಇಲ್ಲದಿದ್ದರೆ ಸೂರ್ಯನ ಚಿತ್ರವನ್ನು ಕಾಗದದ ಷೀಟ್‌ನಲ್ಲಿ ಹಾಯುವಂತೆ ಮಾಡಿ ಬುಧನ ಕಪ್ಪು ಚುಕ್ಕೆ ಹಾದುಹೋಗುವುದನ್ನು ಕಾಣಬಹುದು.
 
ಬುಧನ ಪರಿಭ್ರಮಣ ಅವಧಿ 88 ದಿನಗಳಾಗಿದ್ದು, ಸೌರ ಮಂಡಲದಲ್ಲಿ ಅತೀ ವೇಗವಾಗಿ ಪರಿಭ್ರಮಿಸುತ್ತದೆ. 2006ರಿಂದೀಚೆಗೆ ಇದು ಮೊದಲ ಬುಧ ಪ್ರಯಾಣವಾಗಿದ್ದು, 2019ರವರೆಗೆ ಈ ದೃಶ್ಯ ಗೋಚರಿಸುವುದಿಲ್ಲ. ಬುಧನು ಭೂಮಿ ಮತ್ತು ಸೂರ್ಯನ ನಡುವೆ ಪ್ರತಿ 116 ದಿನಗಳಿಗೊಮ್ಮೆ ಹಾದುಹೋಗುತ್ತದೆ.  ಕರ್ನಾಟಕದಲ್ಲಿ ಮೇ 9ರಂದು ಸಂಜೆ 4.40ಕ್ಕೆ ಈ ಅಪೂರ್ವ ವಿದ್ಯಮಾನ ಗೋಚರಿಸಲಿದ್ದು, ಸೂರ್ಯನ ಮುಂದೆ ಬುಧ ಒಂದು ಚುಕ್ಕೆಯಂತೆ ಹಾದುಹೋಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ