ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ : ಒಬ್ರಡಾರ್

ಗುರುವಾರ, 11 ಆಗಸ್ಟ್ 2022 (12:26 IST)
ಮೆಕ್ಸಿಕೋ : ಜಗತ್ತಿನಲ್ಲಿ ಮುಂದಿನ 5 ವರ್ಷಗಳ ಕಾಲ ಯುದ್ಧವೇ ಇಲ್ಲದೆ ಜೀವನ ನಡೆಸಲು ಸಮಿತಿಯನ್ನು ರಚಿಸಬೇಕು.

ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಮೂವರು ಸದಸ್ಯರಾಗಿರಬೇಕು ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.

ರಷ್ಯಾ, ಚೀನಾ ಯುದ್ಧ ನಡೆಸುತ್ತಿರುವ ಆತಂಕದ ನಡುವೆಯು ಮೆಕ್ಸಿಕನ್ ಅಧ್ಯಕ್ಷರು ಯುದ್ಧ ನಿಲ್ಲಿಸಲು ಸಮಿತಿ ಸ್ಥಾಪನೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇರಬೇಕು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಈ ಸಮಿತಿಯ ಬಗ್ಗೆ ವಿಶ್ವಸಂಸ್ಥೆಗೆ ಲಿಖಿತ ರೂಪದಲ್ಲಿ ಮಂಡಿಸುತ್ತೇನೆ. ಈ ಆಯೋಗದ ಬಗ್ಗೆ ಪ್ರಚಾರ ಮಾಡಲು ಸಹಾಯ ಬೇಕಾಗಿದೆ ಎಂದು ಹೇಳಿದರು.

ಈಗಾಗಲೇ ಯುದ್ಧ ನಡೆಸುತ್ತಿರುವ ಕೆಲವು ದೇಶಗಳು ತಮ್ಮ ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂದು ಮನವಿ ಮಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ