ಆರ್ ಎಸ್ಎಸ್ ಗೆ ದಲಿತ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ: ನಿಮ್ಮಲ್ಲಿ ದಲಿತರನ್ನು ಸಿಎಂ ಮಾಡಿ ಎಂದ ಪಬ್ಲಿಕ್

Krishnaveni K

ಬುಧವಾರ, 15 ಅಕ್ಟೋಬರ್ 2025 (09:06 IST)
ಬೆಂಗಳೂರು: ತಾಕತ್ತಿದ್ದರೆ ಆರ್ ಎಸ್ಎಸ್ ನವರು ತಮ್ಮ ನಾಯಕನಾಗಿ ಒಬ್ಬ ದಲಿತನನ್ನು ನೇಮಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಸವಾಲು ಹಾಕಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನೀವು ದಲಿತ ಸಿಎಂ ಆಯ್ಕೆ ಮಾಡಿ ನೋಡೋಣ ಎಂದಿದ್ದಾರೆ.

ಆರ್ ಎಸ್ಎಸ್ ಸಂಘಟನೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಇನ್ನೂ ಮುಂದುವರಿದಿದೆ. ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ತಿರುಗೇಟು ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ನಿಮಗೆ ಆರ್ ಎಸ್ಎಸ್ ನಾಯಕರ ಮೇಲೆ ಅಷ್ಟು ನಂಬಿಕೆಯಿದ್ದರೆ ಅವರಿಗೆ ಒಬ್ಬ ದಲಿತ ಮಹಿಳೆಯನ್ನು ಆರ್ ಎಸ್ಎಸ್ ಸರಸಂಘಚಾಲಕನಾಗಿ ನೇಮಿಸಲು ಹೇಳಿ. ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದೀರಿ ಎಂದು ನಿಮ್ಮ ಬಿಜೆಪಿಯವರೇ ಹೇಳ್ತಿದ್ದಾರೆ. ಇದೇ ಕಾರಣಕ್ಕೆನಾ ನೀವು ಬಿಜೆಪಿಯವರ ಘರ್ ವಾಪ್ಸಿಯನ್ನು ವಿರೋಧಿಸಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಬಿಜೆಪಿಯವರ ಕತೆ ಬಿಡಿ, ನಿಮ್ಮ ಕಾಂಗ್ರೆಸ್ ನಲ್ಲಿ ಸಿಎಂ ಆಗಿ ಒಬ್ಬ ದಲಿತನನ್ನು ನೇಮಿಸಿ ನೋಡೋಣ. ಹೋಗಲಿ ನಿಮ್ಮ ತಂದೆಯವರೇ ದಲಿತರಾಗಿದ್ದರೂ ಸಿಎಂ ಪಟ್ಟಕ್ಕೇರಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ