ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ : ಅಮರ್ಜಿತ್ ಸಿಂಗ್ ದುಲಾತ್

ಭಾನುವಾರ, 26 ಫೆಬ್ರವರಿ 2023 (18:48 IST)
ಇಸ್ಲಾಮಾಬಾದ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದಲ್ಲಿ ಪಾಕಿಸ್ತಾನವನ್ನು ಸಂಕಷ್ಟದಿಂದ ಪಾರು ಮಾಡ್ತಾರೆ ಎಂದು ಪಾಕ್ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮಾಜಿ ನಿರ್ದೇಶಕ ಅಮರ್ಜಿತ್ ಸಿಂಗ್ ದುಲಾತ್ ಹೇಳಿದ್ದಾರೆ.
 
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಕೆಲ ತಿಂಗಳಿನಿಂದ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದ್ದು, ಆರ್ಥಿಕ ನೆರವಿನ ಅವಶ್ಯಕತೆಯಿದೆ. ಇಂತಹ ಆರ್ಥಿಕ ಬಿಕ್ಕಟ್ಟಿನಿಂದ ನರೇಂದ್ರ ಮೋದಿ ಅವರು ದೇಶವನ್ನು ಪಾರುಮಾಡಬಹುದೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಮುಂದುವರಿದು, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರತಿ ಸಮಯವೂ ಉತ್ತಮ ಸಮಯವಾಗಿದೆ. ಅದಕ್ಕಾಗಿ ನಾವು ನೆರೆಹೊರೆಯವರನ್ನೂ ತೊಡಗಿಸಿಕೊಳ್ಳಬೇಕು. ಒಟ್ಟಿನಲ್ಲಿ ಮೋದಿ ಈ ವರ್ಷದಲ್ಲಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡುತ್ತಾರೆ ಅನ್ನೋದು ನನ್ನ ಊಹೆ. ಆದ್ರೆ ಈ ಬಗ್ಗೆ ಆಂತರಿಕ ಮಾಹಿತಿ ಇಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ