ಭಾರತೀಯ ಸೇನೆಯನ್ನು ಕಳುಹಿಸಿದ್ದು ಮೋದಿ ರಾಹುಲ್ ಗಾಂಧಿಯಲ್ಲ: ಜೈಶಂಕರ್
ನಮ್ಮ ಸರ್ಕಾರದಲ್ಲಿ ಗಡಿಯಲ್ಲಿನ ಮೂಲಸೌಕರ್ಯ ವೆಚ್ಚವನ್ನು ಐದು ಬಾರಿ ಹೆಚ್ಚಿಸಿದ್ದೇವೆ. ಈಗ ಹೇಳಿ, ರಕ್ಷಣಾತ್ಮಕ ಮತ್ತು ಹೊಂದಾಣಿಕೆಯ ವ್ಯಕ್ತಿ ಯಾರು? ನಿಜವಾಗಿ ಯಾರು ಸತ್ಯವನ್ನು ಹೇಳುತ್ತಿದ್ದಾರೆ? ಯಾರು ವಿಷಯಗಳನ್ನು ನಿಖರವಾಗಿ ವ್ಯಕ್ತಪಡಿಸುತ್ತಿದ್ದಾರೆ? ಯಾರು ಇತಿಹಾಸದೊಂದಿಗೆ ಕಾಲೆಳೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಜೈಶಂಕರ್ ಹರಿಹಾಯ್ದಿದ್ದಾರೆ.
ಕಳೆದ ವರ್ಷ ಪ್ಯಾಂಗೊಂಗ್ ಲೇಕ್ ಪ್ರದೇಶದಲ್ಲಿ ಸೇತುವೆ ನಿರ್ಮಿಸಿರುವ ಚೀನಾ ವಿಚಾರವಾಗಿ ಕೇಂದ್ರವನ್ನು ಗುರಿಯಾಗಿಸಿ ಟೀಕಿಸಿದ್ದ ವಿಪಕ್ಷಗಳನ್ನು ಜೈಶಂಕರ್ ತರಾಟೆಗೆ ತೆಗೆದುಕೊಂಡರು. 1962 ರ ಯುದ್ಧದ ನಂತರ ಈ ಪ್ರದೇಶವು ಚೀನಾ ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.