ಪ್ರಧಾನಿ ಇಮ್ರಾನ್ ಖಾನ್ಗೆ ಮತ್ತಷ್ಟು ಸಂಕಷ್ಟ?

ಬುಧವಾರ, 30 ಮಾರ್ಚ್ 2022 (14:02 IST)
ಇಸ್ಲಾಮಾಬಾದ್ : ಅವಿಶ್ವಾಸ ಗೊತ್ತುವಳಿ ಮಂಡನೆ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
 
ಇಮ್ರಾನ್ ಖಾನ್ಗೆ ಬೆಂಬಲ ನೀಡಿದ್ದ ಮುತಾಹಿದಾ ಕ್ವಾಮಿ ಮೂವ್ಮೆಂಟ್ – ಪಾಕಿಸ್ತಾನ ಪಕ್ಷ (ಎಂಕ್ಯೂಎಂ-ಪಿ) ತನ್ನ ಬೆಂಬಲ ವಾಪಸ್ ಪಡೆದುಕೊಂಡಿದೆ.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯು 342 ಸಂಸದರ ಸಾಮರ್ಥ್ಯ ಹೊಂದಿದೆ. 172 ಸ್ಥಾನಗಳು ಬಹುಮತ ಸಂಖ್ಯೆಯಾಗಿದ್ದು, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತ್ರೆಹ್ರೀಕ್ – ಎ – ಇನ್ಸಾಫ್ ಪಕ್ಷ 177 ಸ್ಥಾನಗಳನ್ನು ಹೊಂದಿತ್ತು.

ವಿಪಕ್ಷ ಪಿಪಿಪಿ ಬಳಿ 162 ಸ್ಥಾನಗಳಿದ್ದು, ಸರ್ಕಾರ ರಚನೆಗೆ ಇಮ್ರಾನ್ ಖಾನ್ ಪರ ಸಂಸದರನ್ನು ಸೆಳೆಯುತ್ತಿದೆ.

ಈಗ ಪಿಪಿಪಿಗೆ ಎಂಕ್ಯೂಎಂ-ಪಿ ಪಕ್ಷವೂ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಇಮ್ರಾನ್ ಖಾನ್ ಸರ್ಕಾರ ಕುಸಿದು ಬೀಳುವುದು ಖಚಿತವಾಗಿದೆ. ನಾಳೆ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ಆರಂಭವಾಗಲಿದ್ದು, ಏಪ್ರಿಲ್ 3 ಕ್ಕೆ ಮತದಾನ ನಡೆಯಲಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ