ಪುಟ್ಟ ಬಾಲಕ ಲಿಯಾನ್ ಫೀ ದೇಹ ತನ್ನ ಮನೆ ಹೊರಭಾಗದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಗುವನ್ನು ಕೊಂದ ಆರೋಪದ ಮೇಲೆ ಆತನ ತಾಯಿ ರಾಚೆಲ್ ಫೀ (31) ಮತ್ತು ಆಕೆಯ ಸಲಿಂಗಕಾಮಿ ಸಂಗಾತಿ ನ್ಯೋಮಿ ಫೀ (29)ಯನ್ನು ಬಂಧಿಸಲಾಗಿತ್ತು. ಆದರೆ ಅವರಿಬ್ಬರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಎರಡು ವರ್ಷಗಳ ಕಾಲ ದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಗುವಿನ ಸಾವಿಗೆ ಆತನ ತಾಯಿ ಮತ್ತು ಆಕೆಯ ಸಂಗಾತಿಯೇ ಕಾರಣ ಎಂದು ತೀರ್ಪು ನೀಡಿದೆ.