ಬಡವರ, ದೀನ ದಲಿತರ ಸೇವೆಗೆ ಜೀವನ್ನು ಮುಡುಪಾಗಿಟ್ಟಿದ್ದ ಕ್ರೈಸ್ತ ಸನ್ಯಾಸಿನಿ ಮದರ್ ತೆರೇಸಾ ಅವರಿಗೆ ವ್ಯಾಟಿಕನ್‌ನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಂತ ಪದವಿಯನ್ನು ಘೋಷಿಸಲಾಗುತ್ತದೆ. ಸಂತ ಪದವಿ ನೀಡುವ ಸಮಾರಂಭವನ್ನು ಪೋಪ್ ಫ್ರಾನ್ಸಿಸ್ ನಿರ್ವಹಿಸುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇಂಟ್ ಪೀಟರ್ಸ್ ಚೌಕದಲ್ಲಿ ನೆರೆಯುವರೆಂದು ನಿರೀಕ್ಷಿಸಲಾಗಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಯೋಗ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವ್ಯಾಟಿಕನ್ ತಲುಪಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.