ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

ಗುರುವಾರ, 27 ಅಕ್ಟೋಬರ್ 2022 (11:40 IST)
ವಾಷಿಂಗ್ಟನ್ : ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ಟ್ವಿಟರ್ ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದು, ಟ್ವಿಟ್ಟರ್ ಬಯೋ ಬದಲಿಸಿದ್ದಾರೆ.

ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಸ್ಯಾನ್ಫ್ರಾನ್ಸಿಸ್ಕೊ ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ತಂದರು. ಟ್ವಿಟ್ಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ