ನವದೆಹಲಿ : ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ನಲ್ಲಿನ ಕೆಲವು ಅಂಶಗಳನ್ನು ತೆಗದುಹಾಕುವಂತೆ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಟ್ವಿಟ್ಟರ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
24 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಕೆಲ ದಿನಗಳಿಂದ ಈಚೆಗೆ ಕಾನೂನು ಸಮರ ನಡೆಯುತ್ತಿದೆ.
ಈ ನಡುವೆ ಅಧಿಕಾರಿಗಳಿಂದಲೇ ಟ್ವಿಟ್ಟರ್ ದುಬಳಕೆಯಾಗುತ್ತಿರುವುದಾಗಿ ಟ್ವಿಟ್ಟರ್ ಆರೋಪಿಸಿದೆ. ಕೇಂದ್ರ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ರಾಜ್ಯ ಹೈಕೋರ್ಟ್ಗೆ ಮನವಿ ಮಾಡಿದೆ.
ನ್ಯಾಯಾಂಗ ಪರಾಮರ್ಶೆಯ ಮೂಲಕ ಟ್ವಿಟ್ಟರ್ ನೆರವು ಪಡೆಯಲು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಕಂಪೆನಿ ಪ್ರಯತ್ನ ನಡೆಸುತ್ತಿದೆ. ಸರ್ಕಾರದ ಆದೇಶಗಳ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ಕೇಂದ್ರಸರ್ಕಾರವು ಸ್ವತಂತ್ರ ಸಿಖ್ ದೇಶವನ್ನು ಬೆಂಬಲಿಸುವ ಖಾತೆಗಳು, ರೈತರ ಪ್ರತಿಭಟನೆ ಕುರಿತಾಗಿ ಸುಳ್ಳು ಮಾಹಿತಿ ಹರಡುವ ಪೋಸ್ಟ್ಗಳು ಹಾಗೂ ಕೋವಿಡ್ 19 ಸಾಂಕ್ರಾಮಿಕವನ್ನು ಸರ್ಕಾರ ನಿರ್ವಹಣೆ ಮಾಡಿರುವ ರೀತಿಯನ್ನು ಟೀಕಿಸುವ ಟ್ವೀಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಒಂದು ವರ್ಷದಿಂದ ಒತ್ತಡ ಹೇರುತ್ತಲೇ ಇದೆ.
ಕೇಂದ್ರ ಸರ್ಕಾರದ ಆದೇಶದಿಂದ ವಿನಾಯಿತಿ ಪಡೆಯಲು ಟ್ವಿಟ್ಟರ್ ಕೋರ್ಟ್ ಮೊರೆ ಹೋಗಿದೆ.