ಟ್ವಿಟ್ಟರ್ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್ ಸ್ಪಷ್ಟನೆ

ಬುಧವಾರ, 19 ಏಪ್ರಿಲ್ 2023 (11:41 IST)
ವಾಷಿಂಗ್ಟನ್ : ನಾವು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಹೀಗಾಗಿ ಶೇ.80 ರಷ್ಟು ಉದ್ಯೋಗಿಗಳನ್ನು ತೆಗೆದರೂ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದಾರೆ.

ಅಮೆರಿಕದ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶೇ.20ರಷ್ಟು ಉದ್ಯೋಗಿಗಳನ್ನು ಇಟ್ಟುಕೊಂಡು ಸಂಸ್ಥೆಯನ್ನು ನಡೆಸುವುದಕ್ಕೆ ಕಷ್ಟವಾಗಿಲ್ಲವೇ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಮಸ್ಕ್, ನೀವು ವೈಭವೀಕರಿಸಿದ ಕಾರ್ಯಕರ್ತ ಸಂಘಟನೆಯನ್ನು ನಡೆಸಲು ಪ್ರಯತ್ನಿಸದಿದ್ದರೆ ಮತ್ತು ಸೆನ್ಸರ್ಶಿಪ್ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು.

ಹೀಗಾಗಿ ಶೇ.80 ರಷ್ಟು ಉದ್ಯೋಗವನ್ನು ಕಡಿತ ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದರು. ಸಾಧ್ಯವಾದಷ್ಟು ನ್ಯಾಯಯುತ ಮತ್ತು ಪಕ್ಷಪಾತವಿಲ್ಲದೇ ಕೆಲಸ ಮಾಡುವುದು ಹೊಸ ಟ್ವಿಟ್ಟರ್ನ ಗುರಿ. ಈ ಕಾರಣಕ್ಕೆ ನಾವು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಒಲವು ತೋರುವುದಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ