ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ

ಬುಧವಾರ, 19 ಏಪ್ರಿಲ್ 2023 (11:21 IST)
ವಾಷಿಂಗ್ಟನ್ : ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್ವರ್ಕಿಂಗ್ ಕಂಪನಿ ಮೆಟಾ ಬುಧವಾರದಿಂದ ಮತ್ತೊಂದು ಸುತ್ತು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಸಿದ್ಧವಾಗಿದೆ. ಈ ಬಾರಿಯ ವಜಾ ಪ್ರಕ್ರಿಯೆ ಫೇಸ್ಬುಕ್, ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ನ ಸುಮಾರು 4,000ಕ್ಕೂ ಅಧಿಕ ನುರಿತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
 
ಕಳೆದ ತಿಂಗಳು ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಏಪ್ರಿಲ್ನಲ್ಲಿ ಕಂಪನಿಯ ಸುಮಾರು 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಮೆಟಾ ವಜಾ ಪ್ರಕ್ರಿಯೆ ಪ್ರಾರಂಭಿಸಲು ಮುಂದಾಗಿದ್ದು, ಈ ವಾರದೊಳಗೆ 4,000 ಕ್ಕೂ ಅಧಿಕ ನುರಿತ ಉದ್ಯೋಗಿಗಳನ್ನೇ ವಜಾಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. 

ಕಂಪನಿ ತನ್ನ ತಾಂತ್ರಿಕ ತಂಡದಲ್ಲಿನ ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಈ ಬಗೆಗಿನ ಮಾಹಿತಿಯನ್ನು ತಿಳಿಸಲು ಪ್ರಾರಂಭಿಸಿದೆ. ನಮ್ಮ ತಂಡದ ಗಾತ್ರವನ್ನು ಸುಮಾರು 10,000 ಉದ್ಯೋಗಿಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜುಕರ್ಬರ್ಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ