Dawood Ibrahim: ದಾವೂದ್ ಇಬ್ರಾಹಿಂಗೆ ವಿಷಪ್ರಾಷನ, ಸಂಭ್ರಮಿಸಿದ ನೆಟ್ಟಿಗರು
ದಾವೂದ್ ಪರಿಸ್ಥಿತಿ ಸದ್ಯಕ್ಕೆ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕರಾಚಿಯ ಆಸ್ಪತ್ರೆಯೊಂದರಲ್ಲಿ ಭೂಗತ ಪಾತಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
1993 ಮುಂಬೈ ಸರಣಿ ಸ್ಪೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಡ್ ಪಾತಕಿ ಇತ್ತೀಚೆಗೆ ಖಾಯಿಲೆಗಳ ಗೂಡಾಗಿದ್ದ. ಗ್ಯಾಂಗ್ರಿನ್ ನಿಂದಾಗಿ ಆತನ ಕಾಲ ಬೆರಳುಗಳನ್ನು ತೆಗೆಯಲಾಗಿತ್ತು. ನಡೆದಾಡಲೂ ಕಷ್ಟವಾಗುತ್ತಿತ್ತು ಎಂದು ವರದಿಯಾಗಿತ್ತು. ಇದದರ ಬೆನ್ನಲ್ಲೇ ಈಗ ವಿಷಪ್ರಾಷನ ಮಾಡಿಸಿರುವ ವರದಿಯಾಗಿದೆ.
ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರವಾಗಿರುವ ಸುದ್ದಿ ಬರುತ್ತಿದ್ದಂತೇ ನೆಟ್ಟಿಗರು ಸಂಭ್ರಮಿಸಿದ್ದಾರೆ. ಹಲವು ಅಮಾಯಕರ ಜೀವ ತೆಗೆದಿದ್ದ ಪಾಪಿಗೆ ಈಗ ಸರಿಯಾದ ಶಿಕ್ಷೆಯಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದಾವೂದ್ ಸತ್ತೇ ಹೋದ ಎಂಬಂತೆ ಫೋಟೋಗೆ ಹಾರ ಹಾಕಿರುವ ಮೆಮೆಗಳನ್ನು ಪ್ರಕಟಿಸಿ ಸಂಭ್ರಮಿಸಿದ್ದಾರೆ.