ಚೀನಾದ ಬಾವಲಿಗಳಲ್ಲಿ 24 ಬಗೆಯ ಹೊಸ ಕೊರೋನಾ ವೈರಸ್

ಭಾನುವಾರ, 13 ಜೂನ್ 2021 (10:20 IST)
ಬೀಜಿಂಗ್: ಕೊರೋನಾ ಹೆಮ್ಮಾರಿ ಬಗ್ಗೆ ಚೀನಾದ ಸಂಶೋಧಕರು ಮತ್ತೊಂದು ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ. ಇಲ್ಲಿನ ಬಾಲಿವಗಳಲ್ಲಿ ಹೊಸದಾಗಿ 24 ಬಗೆಯ ಕೊರೋನಾ ವೈರಸ್ ಪತ್ತೆಯಾಗಿದೆಯಂತೆ.


ವಿವಿಧ ಬಾವಲಿ ಪ್ರಭೇದಗಳಿಂದ 24 ಬಗೆಯ ಹೊಸ ವೈರಸ್ ಪತ್ತೆ ಮಾಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ವರದಿಯನ್ನು ಸೆಲ್ ಜರ್ನ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಶಾನ್ ಡಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಂಶೋಧನೆ ಕೈಗೊಂಡಿದ್ದಾರೆ. ಬಾವಲಿಗಳ ಮೂತ್ರ, ಎಂಜಲು ಸಂಗ್ರಹಿಸಿ ಈ ಸಂಶೋಧನೆ ಕೈಗೊಳ್ಳಲಾಗಿದೆಯಂತೆ. ಈಗಾಗಲೇ ನಾಲ್ಕೈದು ತಳಿಯ ಕೊರೋನಾದಿಂದ ವಿಶ್ವ ನಲುಗುತ್ತಿದೆ. ಇದರ ನಡುವೆ ಚೀನಾ ಸಂಶೋಧಕರ ಈ ವರದಿ ಇನ್ನಷ್ಟು ಆಘಾತಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ