ಮುಂದಿನ 48 ಗಂಟೆಗಳ ಕಾಲ ಇಂಟರ್ ನೆಟ್ ಇಲ್ಲ; ಟೆನ್ಷನ್ ಬೇಡ, ಈ ಟಿಪ್ಸ್ ಫಾಲೋ ಮಾಡಿ ನೋಡಿ

ಶುಕ್ರವಾರ, 12 ಅಕ್ಟೋಬರ್ 2018 (16:08 IST)
ನ್ಯೂಯಾರ್ಕ್ :ಊಟಕ್ಕೆ ಇಲ್ಲದಿದ್ದರೂ ಎರಡು ದಿನ ಹೇಗೋ ಇರಬಹುದು. ಆದರೆ ಇಂಟರ್ ನೆಟ್ ಇಲ್ಲದಿದ್ದರೆ ಭಾರಿ ಕಷ್ಟ ಇರೋದು. ಹೀಗ್ಯಾಕೆ ಹೇಳ್ತಿದ್ದಾರೆ ಅಂದುಕೊಂಡ್ರಾ…? ನಿರ್ವಹಣೆ ಕಾರಣದಿಂದ ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಲಭ್ಯವಿರೋದಿಲ್ಲ ಎಂದು ರಷ್ಯಾ ಟುಡೆ ವರದಿ ಮಾಡಿದೆ.


ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದಲ್ಲೇ 2 ದಿನಗಳ ಕಾಲ ಇಂಟರ್ ನೆಟ್ ಸೌಲಭ್ಯ ಇಲ್ಲವಂತೆ.  ಇಂಟರ್‌ನೆಟ್ ಕಾರ್ಪೋರೇಶನ್ ಸಂಸ್ಥೆ (ICANN) ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ನಿರ್ವಹಣೆ ಮಾಡಲಿದೆ. ಈ ವೇಳೆ ನೆಟ್ ಸೇವೆಯಲ್ಲಿ ಏರುಪೇರಾಗಲಿದೆ. ಈ ನಿರ್ವಹಣೆಯಿಂದಾಗಿ ಇಂಟರ್‌ನೆಟ್ ಡೊಮೈನ್ ನೇಮ್ ಸಿಸ್ಟಮ್‌ಗೆ(DNS) ಹೆಚ್ಚಿನ ಭದ್ರತೆ ಸಿಗಲಿದೆ. ಇದರಿಂದ ಸೈಬರ್ ದಾಳಿ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.


ನಿರ್ವಹಣೆಯಿಂದ 2 ದಿನಗಳ ಕಾಲ ಇಂಟರ್‌ನೆಟ್ ಸೇವೆಯಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಕಮ್ಯೂನಿಕೇಶನ್ ರೆಗ್ಯೂಲೇಟರಿ ಅಥಾರಿಟಿ(CRA) ಹೇಳಿದೆ.  

ಟಿಪ್ಸ್ ಇಲ್ಲಿದೆ ನೋಡಿ
ಇಂಟರ್ ನೆಟ್  ಇಲ್ಲ ಎಂದು ತಲೆ ಮೇಲೆ ಕೈಹೊತ್ತುಕೊಂಡು ಕುಳಿತು ಬಿಟ್ರಾ…? ಇಲ್ಲೊಂದಿಷ್ಟು ಟಿಪ್ಸ್ ಇದೆ ಇದನ್ನು ಫಾಲೋ ಮಾಡಿದ್ರೆ ಇಂಟರ್ ನೆಟ್ ಇಲ್ಲದೇ ಇರುವ ಕಷ್ಟ ನಿಮಗೆ ತಟ್ಟುವುದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು.


ರಿಚಾರ್ಚ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿದಂತೆ ಎಲ್ಲಾ ಬಿಲ್ ಪಾವತಿ ಕಡೆ ದಿನಾಂಕ ಪರೀಕ್ಷಿಸಿ. ಬೇಗನೆ ಪಾವತಿಸಿ.

ಬ್ಯಾಂಕ್ ವ್ಯವಹಾರಗಳನ್ನ ಇಂಟರ್ ನೆಟ್ ಮೂಲಕ ಬೇಗ ಮುಗಿಸಿಕೊಳ್ಳಿ

ಟಿಕೆಟ್ ಬುಕ್ಕಿಂಗ್, ಟ್ಯಾಕ್ಸಿ ಬುಕ್ಕಿಂಗ್ ಸೇವೆಯನ್ನ ಈಗಲೇ ಧೃಡಪಡಿಸಿಕೊಳ್ಳಿ

ಆನ್‌ಲೈನ್ ಶಾಪಿಂಗ್ ಬೇಗ ಮುಗಿಸಿಕೊಂಡರೆ ಒಳ್ಳೆಯದು

ಅಗತ್ಯಕ್ಕಾಗಿ ಎಟಿಎಂನಿಂದ ಹಣ ಡ್ರಾ ಮಾಡಿಟ್ಟುಕೊಳ್ಳಿ

ಈಗಲೇ ಇ-ಮೇಲ್ ಹಾಗೂ ಇತರ ಪ್ರಮುಖ ಡಾಕ್ಯುಮೆಂಟ್ ಕಳುಹಿಸುವ ಅಥವಾ ಸ್ವೀಕರಿಸುವ ಕಾರ್ಯ ಮುಗಿಸಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ