ಆನ್ ಲೈನ್ ನಲ್ಲಿ ಫೋನ್ ಖರೀದಿಸುವ ಮೊದಲು ಈ ಸಂಗತಿಗಳ ಬಗ್ಗೆ ಎಚ್ಚರಿಕೆ ವಹಿಸಿ

ಮಂಗಳವಾರ, 2 ಅಕ್ಟೋಬರ್ 2018 (06:53 IST)
ಬೆಂಗಳೂರು: ಆನ್ ಲೈನ್ ಶಾಪಿಂಗ್ ಇತ್ತೀಚೆಗೆ ಜನಪ್ರಿಯ. ಆದರೆ ಆನ್ ಲೈನ್ ಶಾಪಿಂಗ್ ಮಾಡುವಾಗ ಯಾಮಾರುವ ಸಾಕಷ್ಟು ಉದಾಹರಣೆಗಳೂ ನಮ್ಮ ಮುಂದಿವೆ. ಆನ್ ಲೈನ್ ನಲ್ಲಿ ಫೋನ್‍ ಖರೀದಿಸುವ ಮೊದಲು ಈ ವಿಚಾರಗಳ ಬಗ್ಗೆ ಗಮನ ಹರಿಸಿ.

ಒಂದೇ ಸೈಟ್ ನೋಡಬೇಡಿ
ಆನ್ ಲೈನ್ ಮಾರುಕಟ್ಟೆಗಳು ಹಲವಾರು ಇವೆ. ಒಂದೇ ಫೋನ್ ನ್ನು ಬೇರೆ ಬೇರೆ ಆನ್ ಲೈನ್ ಮಾರುಕಟ್ಟೆಯಲ್ಲಿ ನೋಡಿ ಕಂಪೇರ್ ಮಾಡಿಕೊಳ್ಳಿ. ಹಾಗೆಯೇ ಯಾವ ತಾಣದಲ್ಲಿ ಬೆಲೆ ಯಾವ ರೀತಿ ಇದೆ ನೋಡಿಕೊಳ್ಳಿ.

ಗ್ರಾಹಕರ ಫೀಡ್ ಬ್ಯಾಕ್
ಫೋನ್ ಫೀಚರ್ ನ್ನು ಹುಷಾರಾಗಿ ನೋಡುವಂತೆ ಕೊನೆಗೆ ಕೆಲವು ಗ್ರಾಹಕರು ಬರೆದಿರುವ ರಿವ್ಯೂ ಓದುವುದನ್ನೂ ಮರೆಯದಿರಿ.

ಹಳೆಯ ಫೋನ್ ಇರಬಹುದು!
ಇತ್ತೀಚೆಗೆ ಆನ್ ಲೈನ್ ತಾಣಗಳು ಹೊಸ ಫೋನ್ ಗಳ ಜತೆಗೆ ಹಳೆಯ ಅಂದರೆ ಯೂಸ್ಡ್ ಫೋನ್ ಗಳನ್ನೂ ಮಾರಾಟಕ್ಕಿಡುತ್ತವೆ. ಹಾಗಾಗಿ ನೀವು ನೋಡುವ ಫೋನ್ ಹಳೆಯದೋ, ಹೊಸದೋ ಎಂದು ಸೂಕ್ಷ್ಮವಾಗಿ ಅವಲೋಕಿಸಿ.

ಷರತ್ತು ನಿಯಮಗಳು
ಖರೀದಿಸುವ ಮೊದಲು ಫೋನ್ ನ ಗ್ಯಾರಂಟಿ ಪಿರಿಯಡ್, ಷರತ್ತುಗಳು, ನಿಬಂಧನೆಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ.

ಮರುಪರಿಶೀಲನೆ
ನೀವು ಯಾವ ಫೋನ್ ಖರೀದಿಸಲು ಬಯಸಿದ್ದೀರೋ ಆ ಫೋನ್ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಆ ಫೋನ್ ನ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ