ಪ್ರಧಾನಿ ಮೋದಿಯ ನೋಟು ನಿಷೇಧ ಮೆಚ್ಚಿಕೊಂಡಿದ್ದ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ರಿಚರ್ಡ್ ಥ್ಯಾಲರ್

ಬುಧವಾರ, 11 ಅಕ್ಟೋಬರ್ 2017 (08:43 IST)
ನವದೆಹಲಿ: ಭಾರತದ ಪ್ರಧಾನಿ ಮೋದಿ ನೋಟು ನಿಷೇಧ ಕ್ರಮ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿರಬಹುದು. ಆದರೆ ಇತ್ತೀಚೆಗಷ್ಟೇ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಅರ್ಥಶಾಸ್ತ್ರಜ್ಞ ರಿಚರ್ಡ್ ಥ್ಯಾಲರ್ ಮೆಚ್ಚುಗೆಗೆ ಪಾತ್ರವಾಗಿತ್ತು.

 
ನವಂಬರ್ 8 ರಂದು ಪ್ರಧಾನಿ ಮೋದಿ 500 ಮತ್ತು 100 ರೂ.ಗಳ ನೋಟು ನಿಷೇಧಿಸುವುದಾಗಿ ಘೋಷಿಸಿದಾಗ ಟ್ವೀಟ್ ಮಾಡಿದ್ದ ರಿಚರ್ಡ್ ಭ್ರಷ್ಟಾಚಾರ ತಡೆಗಟ್ಟಲು ಇದೊಂದು ಉತ್ತಮ ಕ್ರಮ. ಕ್ರಮೇಣ ಡಿಜಿಟಲ್ ಹಣಕಾಸಿನ ವ್ಯವಹಾರದ ಕಡೆಗೆ ಸಾಗಬೇಕು ಎಂದು ಬೆನ್ನುತಟ್ಟಿದ್ದರು.

ಆದರೆ ಮತ್ತೆ ಹೊಸ 2000 ರೂ. ನೋಟು ಬಿಡುಗಡೆ ಮಾಡಿದಾಗ ಇದೊಂದು ತಪ್ಪು ಹೆಜ್ಜೆ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ