ನವದೆಹಲಿ: ವೈಯ್ಯಕ್ತಿಕ ದಾಳಿಯ ಮೂಲಕನೇ ಆರ್‌ಎಸ್‌ಎಸ್ ತನ್ನ ವಿರೋಧಿಗಳನ್ನು ಗುರಿಯಾಗಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಬಿಹಾರದ ಮಹಾಘಟಬಂಧನ್ ಮಿತ್ರರೊಂದಿಗೆ ಸಂವಾದದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಈ ಮಾತನ್ನು ಹೇಳಿದ್ದಾರೆ. ಅದರ ವೀಡಿಯೊವನ್ನು ಅವರು ನಂತರ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಆರ್‌ಎಸ್‌ಎಸ್ ದಾಳಿಯ ವಿಧಾನವೆಂದರೆ ವೈಯಕ್ತಿಕ ದಾಳಿ.
ಅದೇ ತಂತ್ರವನ್ನು ಮಹಾತ್ಮ ಗಾಂಧಿ ವಿರುದ್ಧ ಬಳಸಲಾಗಿದೆ ಎಂದು ಹೇಳಿದ್ದಾರೆ. . ಆರ್‌ಎಸ್‌ಎಸ್‌ನಿಂದ ಗಾಂಧೀಜಿ ಅವರ ಮೇಲೆ ಎಷ್ಟು ನಿಂದನೆ ಮತ್ತು ಮಾನನಷ್ಟವಾಗಿದೆ ಎಂಬುದು ಜನರಿಗೆ ತಿಳಿದಿಲ್ಲ, ನೆನಪಿಲ್ಲ ಎಂದರು.