ಸುಮ್ಮನೆ ಕೆಣಕುತ್ತಾ ಯುದ್ಧಕ್ಕೆ ಆಹ್ವಾನಿಸುತ್ತಿರುವ ಉತ್ತರ ಕೊರಿಯಾ

ಶುಕ್ರವಾರ, 15 ಸೆಪ್ಟಂಬರ್ 2017 (15:12 IST)
ಚೀನಾ ಬಳಿಕ ಉತ್ತರ ಕೊರಿಯಾ ಸಹ ಯುದ್ಧೋನ್ಮಾದದಿಂದ ಕುದಿಯುತ್ತಿದೆ. ಇತ್ತೀಚೆಗಷ್ಟೇ ಜಪಾನ್ ದೇಶದ ಮೇಲೆ ಹಾದು ಹೋಗುವಂತೆ ಕ್ಷಿಪಣಿ ಪ್ರಯೋಗಿಸಿದ್ದ ಉತ್ತರ ಕೊರಿಯಾ ಮತ್ತೊಮ್ಮೆ ಅದೇ ಕೆಲಸ ಮಾಡುವ ಮೂಲಕ ಯುದ್ಧದ ಮುನ್ಸೂಚನೆ ಕೊಟ್ಟಿದೆ.
 

ಉತ್ತರ ಕೊರಿಯಾ ಪ್ರಯೋಗಿಸಿರುವ ಕ್ಷಿಪಣಿ, ಜಪಾನಿನ ಉತ್ತರ ಭಾಗದ ಹೊಖೈಡೋ ಮೂಲಕ ಹಾದು ಫೆಸಿಫಿಕ್ ಸಾಗರ ಸೇರಿದೆ. ಈ ಅಣ್ವಸ್ತ್ರ ಪ್ರಯೋಗದಿಂದ ಯುದ್ಧ ಭೀತಿ ಶುರುವಾಗಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನಿನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 2000 ಕಿ.ಮೀ ಸಂಚರಿಸಿದ ಕ್ಷಿಪಣಿ ಹಖೈಡೋ ಮೂಲಕ ಹಾದು ಪೆಸಿಫಿಕ್ ಸಾಗರ ಸೇರಿತು ಎಂದು ಜಪಾನಿನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿಡೆ ಸುಗಾ ಹೇಳಿದ್ದಾರೆ.ಬೆಳಗ್ಗೆ 7 ಗಂಟೆ ಸುಮಾರಿಗೆ ದೇಶದ ಜನರ ಮೊಬೈಲ್`ಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.ತಿಂಗಳಲ್ಲಿ 2ನೇ ಬಾರಿಗೆ ಇಂಥದ್ದೊಂದು ಕ್ಷಿಪಣಿ ಪ್ರಯೋಗ ನಡೆದಿದ್ದು, ಜಪಾನಿಯರನ್ನ ಆತಂಕಕ್ಕೆ ದೂಡಿದೆ ಎಂದು ಅಮೆರಿಕ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ