ಚೀನಾ ಬಳಿಕ ಉತ್ತರ ಕೊರಿಯಾದಿಂದ ಯುದ್ಧಕ್ಕೆ ಪ್ರಚೋದನೆ

ಮಂಗಳವಾರ, 29 ಆಗಸ್ಟ್ 2017 (11:19 IST)
ಯುದ್ಧೋನ್ಮಾದದಲ್ಲಿ ಕುದಿಯುತ್ತಿರುವ ಉತ್ತರ ಕೊರಿಯಾ ಮತ್ತೊಮ್ಮೆ ಇತರ ದೇಶಗಳನ್ನ ಕೆಣಕುವ ದುಸ್ಸಾಹಕ್ಕೆ ಕೈಹಾಕಿದೆ. ಜಪಾನ್ ದೇಶದ ಮೇಲೆ ಹಾದು ಹೋಗುವ ರೀತಿ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗವನ್ನ ನಡೆಸಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಪ್ರಚೋದನಕಾರಿ ಪ್ರಯೋಗವಿದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಂಗಳವಾರ ಜಪಾನ್ ದೇಶದ ಹೊಕೈಡೋ ದ್ವೀಪದ ಮೇಲೆ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗಿಸಿದ್ದು, ಯಾವುದೇ ಹಾನಿ ಮಾಡದೇ ಸಮುದ್ರದಲ್ಲಿ ಬಿದ್ದಿದೆ. ಆದರೆ, ಈ ಕ್ಷಿಪಣಿ ಪ್ರಯೋಗದ ಹಿಂದಿನ ುತ್ತರ ಕೊರಿಯಾದ ದುರುದ್ಧೇಶ ಬಯಲಿಗೆ ಬಂದಿದೆ.
ದ್ವೀಪದ ಮೇಲೆ ಉತ್ತರ ಕೊರಿಯಾ ಕ್ಷಿಪಣಿ ಹಾರಿ ಹೋಗುತ್ತಿದ್ದಂತೆ ಜಪಾನಿನ ಟಿವಿ ಕಾರ್ಯಕ್ರಮಗಳನ್ನ ಕೂಡಲೇ ರದ್ದು ಮಾಡಿ ದೇಶದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಹಲವು ಬುಲೆಟ್ ಟ್ರೇನ್`ಗಳು ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿವೆ.  1998ರಿಂದ ಜಪಾನ್ ದೇಶದಿಂದ ಮೇಲೆ ಹಾರಿಹೋದ 3ನೇ ಕ್ಷಿಪಣಿ ಇದಾಗಿದೆ ಎಂದು ಜಪಾನ್ ತಿಳಿಸಿದೆ.

ಜಪಾನ್ ದೇಶದ ಮೇಲೆ ಹಾದು ಹೋಗುವ ರೀತಿ ಉತ್ತರ ಕೊರಿಯಾ ದೇಶ ಕ್ಷಿಪಣಿ ಪ್ರಯೋಗಿಸಿರುವುದು ದೇಶಕ್ಕೆ ನಿಜವಾದ ಆತಂಕ ತಂದಿದೆ ಎಂದು ಜಪಾನ್ ಪ್ರಧಾನಿ ಶಿನ್ಜೋ ಅಬೆ ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಜಪಾನ್ ಪ್ರಧಾನಿ ಶಿಂಜೋ ಅಬೆ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ