ಚೀನಾ ವಿರುದ್ಧ ಹೋರಾಟಕ್ಕೆ ಭಾರತ ಪರ ನಿಂತ ಜಪಾನ್

ಶುಕ್ರವಾರ, 18 ಆಗಸ್ಟ್ 2017 (16:39 IST)
ದೊಕ್ಲಾಮ್`ನಲ್ಲಿ ಎರಡು ತಿಂಗಳಿನಿಂದ ಏರ್ಪಟ್ಟಿರುವ ಭಾರತ ಮತ್ತು ಚೀನಾ ನಡುವಿನ ಪ್ರಕ್ಷುಬ್ದ ವಾತಾವರಣಕ್ಕೆ ಸಂಬಂಧಿಸಿದಂತೆ ಜಪಾನ್ ದೇಶ ಭಾರತಕ್ಕೆ ಬೆಂಬಲ ಸೂಚಿಸಿದೆ.
 

ದೊಕ್ಲಾಮ್, ಚೀನಾ ಮತ್ತು ಭೂತಾನ್ ದೇಶಗಳ ವಿವಾದಿತ ಪ್ರದೇಶವಾಗಿದೆ. ಬಲಪ್ರಯೋಗದಿಂದ ಸ್ಥಿತಿ ಬದಲಾಣೆಣೆಗೆ ಯತ್ನಿಸುವುದು ಸರಿಯಲ್ಲ. ಶಾಂತಿಯುತ ವಾತಾವರಣದ ಮೂಲಕ ಸಮಸ್ಯೆ ಬಗ್ಗೆಹರಿಸಿಕೊಳ್ಳಬೇಕು. ಇದರಲ್ಲಿ ಭಾರತದ ನಿರ್ಧಾರ ಸರಿಯಾಗಿದೆ ಎಂದು ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸು ಹೇಳಿದ್ದಾರೆ.

ದೊಕ್ಲಾಮ್ ವಿವಾದವನ್ನ ಜಪಾನ್ ತೀರಾ ಹತ್ತರದಿಂದ ಗಮನಿಸುತ್ತಿದ್ದು, ಪರಿಸ್ಥಿತಿ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಭೂತಾನ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದದ ಅನುಸಾರವಾಗಿ ಭಾರತ ಸೇನೆಯನ್ನ ನಿಯೋಜಿಸಿದೆ. ಈ ಕುರಿತಂತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ರಾಜತಾಂತ್ರಿಕವಾಗಿ ಎರಡೂ ದೇಶಗಳೂ ಒಪ್ಪುವಂತಹ ಶಾಂತಿಯುತ ನಿರ್ಣಯ ಕೈಗೊಳ್ಳಲು ಮುಂದಾಗಿರುವ ಭಾರತದ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳಿದ್ಧಾರೆ.

 ಜೂನ್`ನಲ್ಲಿ ವಿವಾದಿತ ದೊಕ್ಲಾಮ್ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಭಾರತ ಅಲ್ಲಿ ಸೇನಾ ಜಮಾವಣೆ ಮಾಡಿ ಚೀನಾವನ್ನ ಹಿಮ್ಮೆಟ್ಟಿಸಿತ್ತು. ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಭಾರತ ವಿರೋಧಿಸಿತ್ತು. ಈ ವಿವಾದವನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಲಲು ಭಾರತ ಸಿದ್ಧವಿದ್ದರೂ ಸಹ ಚೀನಾ ಒತ್ತಡ ಮತ್ತು ಯುದ್ಧದ ಬೆದರಿಕೆ ಮೂಲಕ ಮಣಿಸುವ ತಂತ್ರ ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ