ನಾರ್ವೆಯಲ್ಲಿ ಮತ್ತೆ ಭಾರತೀಯ ಮೂಲದ ದಂಪತಿಗಳ ಮಗುವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ.
ನಾರ್ವೆಯಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿರುವ ಅನಿಲ್ ಕುಮಾರ್ ಅವರ ಐದುವರೆ ವರ್ಷದ ಮಗುವನ್ನು ಕಳೆದ ಬುಧವಾರ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಮಗುವಿಗೆ ದಂಪತಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ನಾರ್ವೆ ಅಧಿಕಾರಿಗಳು ಅಂಗನವಾಡಿಯಲ್ಲಿದ್ದ ಆರ್ಯನ್‌ನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ನಾವು ಮಗುವನ್ನು ಕಡೆಗಣಿಸುತ್ತಿಲ್ಲ. ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಯಾವುದೇ ಮಾಹಿತಿಯನ್ನು ನೀಡದೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕುಮಾರ್ ಆರೋಪಿಸಿದ್ದು, ತಮ್ಮ ಮಗುವನ್ನು ಹಿಂದಕ್ಕೆ ಪಡೆಯಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ವಿದೇಶಾಂಗ ಇಲಾಖೆ ಅವರಿಗೆ ನೆರವು ನೀಡುವ ಆಶ್ವಾಸನೆ ನೀಡಿದೆ. ಕಳೆದೈದು ವರ್ಷಗಳಲ್ಲಿ ಭಾರತೀಯ ದಂಪತಿ ಮಕ್ಕಳನ್ನು ನಾರ್ವೆ ಮಕ್ಕಳ ಕಲ್ಯಾಣ ಇಲಾಖೆ ವಶಪಡಿಸಿಕೊಂಡಿರುವುದು ಇದು ಮೂರನೆಯ ಪ್ರಕರಣ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ