ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ!
ಚಿಕಾಗೋದ ಬ್ರೂಕ್ ಫೀಲ್ಡ್ ಮೃಗಾಲಯವೊಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ಭಗ್ನ ಪ್ರೇಮಿಗಳಿಗೆ ಒಳ್ಳೆ ಆಫರ್ ಕೊಟ್ಟಿದೆ. ಜಿರಳೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ಸೇಡು ತೀರಿಸಿಕೊಳ್ಳಿ ಎಂದು ಆಫರ್ ನೀಡಿದೆ!
ಮೃಗಾಲಯದಲ್ಲಿ ಭಾರತೀಯ ಕರೆನ್ಸಿ 150 ರೂ. ನೀಡಿ ಜಿರಳೆಗೆ ಹಳೇ ಲವ್ವರ್ ನ ಹೆಸರು ಇಡಬಹುದು. ಇದರಿಂದ ಹಳೇ ಲವ್ವರ್ ಗೆ ಗೌರವ ಸೂಚಿಸಿದಂತಾಗುತ್ತದೆ ಅಥವಾ ಅವರ ಮೇಲಿನ ಕೋಪ ತೀರಿಸಿಕೊಂಡಂತಾಗುತ್ತದೆ ಎಂದು ಮೃಗಾಲಯ ಆಫರ್ ನೀಡಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ.