ಬೈ ಟು ಲವ್ ಜೊತೆಗೆ ಖುಷಿ ಸುದ್ದಿ ಹಂಚಿಕೊಂಡ ಶ್ರೀಲೀಲಾ
ಶ್ರೀಲೀಲಾ-ಧನ್ವೀರ್ ಗೌಡ ಅಭಿನಯದ ಬೈ ಟು ಲವ್ ಸಿನಿಮಾದ ಟೈಟಲ್ ಹಾಡೊಂದು ಮೊನ್ನೆ ಬಿಡುಗಡೆಯಾಗಿದ್ದು, ಭರ್ಜರಿ ವ್ಯೂ ಪಡೆದುಕೊಂಡಿದೆ. ಈ ಯುವ ಸೆನ್ಸೇಷನಲ್ ಜೋಡಿಯ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿರುವುದಂತೂ ಸುಳ್ಳಲ್ಲ.
ಇದರ ಜೊತೆಗೇ ಶ್ರೀಲೀಲಾ ಖುಷಿ ಸಮಾಚಾರವೊಂದನ್ನು ನೀಡಿದ್ದಾರೆ. ಈ ಸಿನಿಮಾ ಮೂಲಕ ಶ್ರೀಲೀಲಾ ಇದೇ ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದಾರೆ. ಇದುವರೆಗೆ ತಮ್ಮ ಸಿನಿಮಾಗೆ ಬೇರೆಯವರಿಂದ ಡಬ್ ಮಾಡಿಸಲಾಗುತ್ತಿತ್ತು. ಹೀಗಾಗಿ ತಮಗೆ ಅದು ತೃಪ್ತಿ ಕೊಡುತ್ತಿರಲಿಲ್ಲ. ಆದರೆ ಈಗ ನಿರ್ದೇಶಕರಿಗೆ ದಂಬಾಲು ಬಿದ್ದು ನಾನೇ ಡಬ್ ಮಾಡಿದ್ದೇನೆ. ಖುಷಿಯಾಗುತ್ತಿದೆ ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ.