ಇಸ್ಲಾಮಾಬಾದ್: ಭಾರತದ ದಾಳಿಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ದಿವಾಳಿಯತ್ತ ಸಾಗಿರುವ ದೇಶದಲ್ಲಿ ಈಗ ಇಂಧನ ಕೊರತೆ ಎದುರಾಗಿದೆ. ಮುಂದಿನ 48 ಗಂಟೆಗಳ ಕಾಲ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಸಂಪೂರ್ಣವಾಗಿ ಬಂದ್ ಇರಲಿದೆ.
ಅಪರೇಷನ್ ಸಿಂಧೂರ ಎಫೆಕ್ಟ್ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ.
ಇಸ್ಲಾಮಾಬಾದ್ ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿವೆ.
ಹೀಗಾಗಿ ಮುಂದಿನ 48ಗಂಟೆವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್ ಸರ್ಕಾರಕ್ಕೆ ಭಾರೀ ನಷ್ಟವಾಗಲಿದೆ.
ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾವುತ್ತಿದ್ದು, ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ.