ಪ್ರತಿ ದಾಳಿ ಮಾಡಿಯೇ ಸಿದ್ಧ: ಭಾರತಕ್ಕೆ ಪಾಕ್ ಬೆದರಿಕೆ

ಮಂಗಳವಾರ, 26 ಫೆಬ್ರವರಿ 2019 (11:59 IST)
ನವದೆಹಲಿ: ತನ್ನ ವಾಯುನೆಲೆಗೆ ಬಂದು ಉಗ್ರರ ಮೇಲೆ ದಾಳಿ ಮಾಡಿ ಹೋದ ಭಾರತದ ಮೇಲೆ ಪ್ರತಿಕಾರ ಮಾಡಿಯೇ ಸಿದ್ಧ ಎಂಬ ಬೆದರಿಕೆ ಹಾಕಿದೆ.


ತುರ್ತು ಸಭೆ ಕರೆದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಪಾಕ್ ಸರ್ಕಾರ ಅಧಿಕೃತವಾಗಿ ಈ ಹೇಳಿಕೆ ನೀಡಿದೆ.

ನಾವು ಭಾರತದ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದೇವೆ. ಸದ್ಯದಲ್ಲೇ ಭಾರತೀಯ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕ್ ಸರ್ಕಾರ ಹೇಳಿಕೆ ನೀಡಿದೆ. ಆದರೆ ಈಗಾಗಲೇ ಭಾರತೀಯ ಸೇನೆ ಈಗಾಗಲೇ ಗಡಿ ಭಾಗಗಳಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಿದೆ. ಈ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ