ಅಂದು ಸರ್ಜಿಕಲ್ ಸ್ಟ್ರೈಕ್: ಇಂದು ಏರ್ ಸ್ಟ್ರೈಕ್? ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಮಂಗಳವಾರ, 26 ಫೆಬ್ರವರಿ 2019 (09:43 IST)
ನವದೆಹಲಿ: ಉರಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ಭೂ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಆದರೆ ಈ ಬಾರಿ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿದ್ದು ಭಾರತೀಯ ವಾಯು ಸೇನೆ.
ವಾಯು ಸೇನೆ ನಡೆಸಿದ್ದು ಈ ಬಾರಿ ಏರ್ ಸ್ಟ್ರೈಕ್. ಇದು ನಡೆದಿರುವುದು ಬೆಳಗಿನ ಜಾವ 3.30 ಕ್ಕೆ. ಪಂಜಾಬ್ ನ ಆದಂಪುರ್ ವಾಯುನೆಲೆಯಿಂದ ಹೊರಟ ಮಿರಾಜ್ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡುಗದಾಣಗಳ ಮೇಲೆ 1000 ಕೆಜಿ ತೂಕದ ಬಾಂಬ್ ಸುರಿಮಳೆಗೈದಿತ್ತು.
ಈ ಸಂದರ್ಭದಲ್ಲಿ ಭಾರತೀಯ ವಾಯುಸೇನೆಗೆ ಯಾವುದೇ ಹಾನಿಯಾಗದೇ ಮರಳಿ ಬಂದಿದ್ದು, ನಮ್ಮ ಹೆಮ್ಮೆ. ಪಾಕಿಸ್ತಾನದ ರಾಡರ್ ಕಣ್ತಪ್ಪಿಸಿ ವಾಯು ಪಡೆ ವಿಮಾನಗಳು ಸುಮಾರು 40 ನಿಮಿಷ ಕಾರ್ಯಾಚರಣೆ ನಡೆಸಿವೆ. ಪಾಕ್ ವಾಯು ಸೇನೆ ಪ್ರತಿದಾಳಿ ನಡೆಸುವಷ್ಟರಲ್ಲಿ ಭಾರತೀಯ ವಾಯು ಪಡೆ ಸ್ಥಳದಿಂದ ನಿರ್ಗಮಿಸಿತ್ತು. ಒಟ್ಟು 1000 ಕೆಜಿ ತೂಕದ 10 ಬಾಂಬ್ ಗಳನ್ನು ವಾಯು ಪಡೆ ಹಾಕಿದ್ದು, ಇದು ಲೇಜರ್ ನಿಯಂತ್ರಿತ ಬಾಂಬ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.