ಮೋದಿ ಟೀಕಿಸುವಾಗ ಪಾಕ್ ಸಚಿವನಿಗೆ ಕರೆಂಟ್ ಶಾಕ್!

ಶನಿವಾರ, 31 ಆಗಸ್ಟ್ 2019 (10:51 IST)
ನವದೆಹಲಿ: ಪ್ರಧಾನಿ ಮೋದಿ ಎಂದರೆ ಪವರ್ ಫುಲ್ ಮನುಷ್ಯ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಆದರೆ ಅವರು ಎಷ್ಟು ಪವರ್ ಫುಲ್ ಎಂಬುದು ಈಗ ಪಾಕಿಸ್ತಾನದ ರೈಲ್ವೇ ಸಚಿವರಿಗೆ ಸರಿಯಾಗಿಯೇ ಗೊತ್ತಾಗಿದೆ!


ಕಾಶ್ಮೀರ್ ಅವರ್ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಪ್ರಧಾನಿ ಮೋದಿ ವಿರುದ್ಧ ಯರ್ರಾ ಬಿರ್ರಿ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಮೈಕ್ ನಿಂದ ಶಾಕ್ ಹೊಡೆದಿದೆ.

ಮೋದಿ ನಿಮ್ಮ ಉದ್ದೇಶ ಏನೆಂದು ನಮಗೆ ಗೊತ್ತಿದೆ ಎಂದು ಶೇಖ್ ರಶೀದ್ ಹೇಳುತ್ತಿದ್ದಂತೇ ಕೈನಲ್ಲಿದ್ದ ಮೈಕ್ ನಿಂದ ಅವರಿಗೆ ಶಾಕ್ ಹೊಡೆದಿದೆ. ಹಾಗಿದ್ದರೂ ತಮ್ಮನ್ನು ಸಾವರಿಸಿಕೊಂಡು ಕರೆಂಟ್ ಹೊಡೆದಂತಿದೆ. ಪರವಾಗಿಲ್ಲ, ಆದರೂ ನಾನು ಇದನ್ನು ಕರೆಂಟ್ ಬಂತು ಎಂದೇ ಭಾವಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ