ಭಾರತದ ಗಡಿಯೊಳಕ್ಕೆ ನುಗ್ಗಿದ ಪಾಕ್ ಕಮಾಂಡೋಗಳು?! ಗಡಿಯಲ್ಲಿ ಕಟ್ಟೆಚ್ಚರ

ಶುಕ್ರವಾರ, 30 ಆಗಸ್ಟ್ 2019 (10:04 IST)
ನವದೆಹಲಿ: ಹೇಗಾದರೂ ಮಾಡಿ ಕಾಶ್ಮೀರದ ಮೇಲೆ ತಮ್ಮ ಹಿಡಿತ ಸಾಧಿಸಬೇಕೆಂಬ ದುರಾಸೆಯಲ್ಲಿರು ಪಾಕಿಸ್ತಾನ ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ತನ್ನ ಕಮಾಂಡೋಗಳನ್ನು, ಉಗ್ರರನ್ನು ನುಸುಳಿಸುವ ಪ್ರಯತ್ನ ಮಾಡಿದೆ ಎಂಬ ಸುದ್ದಿ ಬಂದಿದೆ.


ಭಾರತದೊಳಗೆ ಹಿಂಸಾಚಾರ ನಡೆಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಪಾಕ್ ಗಡಿಯೊಳಗೆ ಉಗ್ರರನ್ನು ನುಸುಳಿಸುವ ಪ್ರಯತ್ನ ನಡೆಸಿದೆ. ಕೆಲವು ಮೂಲಗಳ ಪ್ರಕಾರ ಗುಜರಾತ್ ಬಂದರ್ ಗಳ ಮೇಲೆ ಉಗ್ರರಿಂದ ದಾಳಿ ನಡೆಸಲು ಹುನ್ನಾರ ನಡೆಸಿದೆ ಎಂಬ ಮಾಹಿತಿ ಬಂದಿದೆ.

ಪಾಕಿಸ್ತಾನದ ಈ ದುಸ್ಸಾಹದಿಂದ ಕ್ರುದ್ಧವಾಗಿರುವ ಭಾರತ ಖಡಕ್ ಆಗಿಯೇ ಎಚ್ಚರಿಕೆ ನೀಡಿದೆ. ಸುಖಾಸುಮ್ಮನೇ ಗಡಿಯೊಳಕ್ಕೆ ನುಗ್ಗಿ ನಮ್ಮ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗೃಹಸಚಿವ  ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಗಡಿಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ದಾಳಿ ನಡೆಸುವ ಸಾಧ್ಯತೆಗಳಿರುವ ಪ್ರಮುಖ ಸ್ಥಳಗಳಿಗೆ ಬಿಗಿ ಬಂದೋಬಸ್ತು ಒದಗಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ