ಮುಂಬೈ ಭಯೋತ್ಪಾದನ ದಾಳಿ ಪ್ರಕರಣದಲ್ಲಿ ವಾದಿಸಿದ ಸರ್ಕಾರಿ ವಕೀಲರನ್ನು ಕೈಬಿಟ್ಟ ಪಾಕಿಸ್ತಾನ

ಸೋಮವಾರ, 30 ಏಪ್ರಿಲ್ 2018 (07:30 IST)
ಇಸ್ಲಾಮಾಬಾದ್ : ಮುಂಬೈ ಭಯೋತ್ಪಾದನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪರ ವಾದಿಸುತ್ತಿದ್ದ ಸರ್ಕಾರಿ ವಕೀಲರನ್ನು ಇದೀಗ ಪಾಕಿಸ್ತಾನದ ಆಂತರಿಕ ಸಚಿವಾಲಯ ತೆಗೆದುಹಾಕಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


2008ರ ನವೆಂಬರ್ ನಲ್ಲಿ ಲಷ್ಕರ್ ಇ ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆ ಮುಂಬೈನಲ್ಲಿ ಉಗ್ರ ದಾಳಿ ನಡೆಸಿದ್ದು ಈ ದಾಳಿಯಲ್ಲಿ166 ಮಂದಿ ಮೃತಪಟ್ಟಿದ್ದು 300 ಮಂದಿ ಗಾಯಗೊಂಡಿದ್ದರು. ಮಹತ್ವದ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಚೌಧರಿ ಅಝರ್‌ ಅವರು 2009ರಿಂದಲೂ ಪಾಕಿಸ್ತಾನ ಸರಕಾರದ ಪರವಾಗಿ ವಾದಿಸಿದ್ದರು. ಆದರೆ ಸರಕಾರದ ನಿಲುವಿನಂತೆ  ನಡೆಯದಿರುವುದಕ್ಕಾಗಿ ಅವರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ