ಡಿ'ಲಿಟ್‌ ಪುರಸ್ಕೃತರ ಪಟ್ಟಿಯಿಂದ ನಟ ಅಮಿತಾಭ್‌ ಬಚ್ಚನ್‌ ಹೆಸರನ್ನು ಡಿಲೀಟ್ ಮಾಡಿದ್ದಾದರೂ ಯಾಕೆ?

ಸೋಮವಾರ, 30 ಏಪ್ರಿಲ್ 2018 (06:59 IST)
ಮುಂಬೈ : ಬಾಲಿವುಡ್ ನ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಒಂದು ಶಾಕಿಂಗ್ ನ್ಯೂಸ್. ಅದೇನೆಂದರೆ ವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಈ ವರ್ಷದ ಡಿ'ಲಿಟ್‌ ಪುರಸ್ಕೃತರ ಪಟ್ಟಿಯಿಂದ ನಟ ಅಮಿತಾಭ್‌ ಬಚ್ಚನ್‌ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆಯಂತೆ.


ವಿಶ್ವವಿದ್ಯಾನಿಲಯದ 43ನೇ ಘಟಿಕೋತ್ಸವ ಮೇ 8ರಂದು ನಡೆಯಲಿದ್ದು, ಆದರೆ ನಟ ಅಮಿತಾಬ್ ಬಚ್ಚನ್ ಅವರಿಗೆ ಚಿತ್ರೀಕರಣಗಳಿರುವುದರಿಂದ  ಅಂದು ಪುರಸ್ಕಾರವನ್ನು ಸ್ವೀಕರಿಸಲು ಸಾಧ್ಯವಾಗದ ಕಾರಣ ಅವರ ಅನುಪಸ್ಥಿತಿಯಲ್ಲಿ ಗೌರವ ಪುರಸ್ಕಾರ ನೀಡಬಾರದು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರ ಸೂಚನೆ ಮೇರೆಗೆ ಈ ವರ್ಷದ ಡಿ'ಲಿಟ್‌ ಪುರಸ್ಕೃತರ ಪಟ್ಟಿಯಿಂದ ಅಮಿತಾಭ್‌ ಬಚ್ಚನ್‌ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆಯಂತೆ. ಈ ಬಗ್ಗೆ ಕುಲಪತಿ ಸಬ್ಯಸಾಚಿ ಬಸು ರಾಯ್‌ ಚೌಧುರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ