Pakistan Army: ಭಾರತದ ದಾಳಿಗೆ ಹೆದರಿ ತನ್ನ ಕುಟುಂಬವನ್ನು ಲಂಡನ್ ಗೆ ರವಾನಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್

Krishnaveni K

ಮಂಗಳವಾರ, 29 ಏಪ್ರಿಲ್ 2025 (09:04 IST)
ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯ ಬಳಿಕ ಭಾರತ ದಾಳಿ ನಡೆಸುವ ಭೀತಿ ಪಾಕಿಸ್ತಾನಕ್ಕಿದೆ. ಈ ನಡುವೆ ಇದೇ ಭಯದಲ್ಲಿ ಪಾಕಿಸ್ತಾನ ಆರ್ಮಿ ಮುಖ್ಯಸ್ಥ ಅಸೀಂ ಮುನೀರ್ ತಮ್ಮ ಕುಟುಂಬವನ್ನು ಲಂಡನ್ ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತ ತನ್ನ ಮೇಲೆ ಆರೋಪ ಮಾಡುತ್ತಿದ್ದಂತೇ ಪಾಕಿಸ್ತಾನ ಠಾಕೂಠೀಕಾಗಿ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ. ಆದರೆ ಇನ್ನೊಂದೆಡೆ ಒಳಗೊಳಗೇ ಭಯದಲ್ಲಿ ಮುದ್ದೆಯಾಗಿದೆ ಎನ್ನಲಾಗಿದೆ.

ಈ ಕಾರಣಕ್ಕೆ ಕಾಶ್ಮೀರ ನಮ್ಮದು ಎಂದೆಲ್ಲಾ ಮೊನ್ನೆಯಷ್ಟೇ ಗುಡುಗಿದ್ದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಈಗ ನಾಪತ್ತೆಯಾಗಿದ್ದಾರೆ. ಇನ್ನು ಪಹಲ್ಗಾಮ್ ನಲ್ಲಿ ದಾಳಿಯಾಗುತ್ತಿದ್ದಂತೇ ಸುರಕ್ಷತೆ ದೃಷ್ಟಿಯಿಂದ ತಮ್ಮ ಕುಟುಂಬವನ್ನು ಮುನೀರ್ ಲಂಡನ್ ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಅಸೀಂ ಮುನೀರ್ ಎಲ್ಲಿ ಎಂದು ಕೇಳಿದರೆ ಪಾಕಿಸ್ತಾನ ನೂರೆಂಟು ಕುಂಟು ನೆಪ ಹೇಳುತ್ತಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಪಾಕಿಸ್ತಾನ ಸೇನಾ ಮುಖ್ಯಸ್ಥರ ಬಗ್ಗೆ ನೂರೆಂಟು ಟ್ರೋಲ್ ಗಳಾಗುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ