ಭಾರತಕ್ಕೆ ಈಗ ಯಾರೂ ಫ್ರೆಂಡ್ಸ್ ಇಲ್ಲ, ಯುದ್ಧ ನಡೆದರೆ ನಾವೇ ಗೆಲ್ಲೋದು: ಪಾಕಿಸ್ತಾನ ಸಚಿವ ಆಸಿಫ್
ಸದಾ ಯಡವಟ್ಟು ಹೇಳಿಕೆಗಳಿಂದಲೇ ನಗೆಪಾಟಲಿಗೀಡಾಗುವ ಖ್ವಾಜಾ ಆಸಿಫ್ ಈಗ ನಾವೇ ಶಕ್ತಿಶಾಲಿಗಳು ಎಂದು ಕೊಚ್ಚಿಕೊಂಡಿದ್ದಾರೆ. ಪಾಕಿಸ್ತಾನ ಮತ್ತು ಅಮೆರಿಕಾ ಇತ್ತೀಚೆಗಿನ ದಿನಗಳಲ್ಲಿ ಭಾರೀ ಹತ್ತಿರವಾಗುತ್ತಿರುವ ಬೆನ್ನಲ್ಲೇ ಖ್ವಾಜಾ ಆಸಿಫ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಭಾರತದ ಸೇನಾ ನಾಯಕ ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಇದೇ ರೀತಿ ಒತ್ತಡ ಮುಂದುವರಿಸಿದರೆ ಯುದ್ಧ ಮಾಡಬೇಕಾಗುತ್ತದೆ. ಒಂದು ವೇಳೆ ಮತ್ತೆ ಯುದ್ಧವಾದರೆ ಫಲಿತಾಂಶ ನಮ್ಮ ಪರವಾಗಿ ಬರಲಿದೆ ಎಂದಿದ್ದಾರೆ.
ಭಾರತಕ್ಕೆ ಈಗ ಮೊದಲಿನಂತೆ ಮಿತ್ರರಿಲ್ಲ. ಹಲವು ಮಿತ್ರರನ್ನು ಕಳೆದುಕೊಂಡಿದೆ. ಮುಂದೆ ಇನ್ನಷ್ಟು ದೇಶಗಳನ್ನು ಕಳೆದುಕೊಳ್ಳಲಿದೆ. ಪಾಕಿಸ್ತಾನಕ್ಕೆ ಅಮೆರಿಕಾ ಕ್ಷಿಪಣಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಇದರ ಬೆನ್ನಲ್ಲೇ ಪಾಕ್ ಸಚಿವ ಈ ರೀತಿ ಕೊಚ್ಚಿಕೊಂಡಿದ್ದಾರೆ.