Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

Krishnaveni K

ಸೋಮವಾರ, 19 ಮೇ 2025 (11:21 IST)
ಇಸ್ಲಾಮಾಬಾದ್: ಅಜ್ಞಾತ ಶೂಟರ್ ನ ಗುಂಡಿಗೆ ಬಲಿಯಾದ ಲಷ್ಕರ್ ತೊಯ್ಬಾ ಉಗ್ರ ಸೈಫುಲ್ಲಾ ಖಾಲಿದ್ ಮೃತದೇಹಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ನೀಡಲಾಗಿದೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ನಾಟಕ ಬಯಲಾಗಿದೆ.

ತನಗೂ ಉಗ್ರರಿಗೂ ಸಂಬಂಧವೇ ಇಲ್ಲ ಎಂದು ಜಗತ್ತಿನ ಮುಂದೆ ನಾಟಕವಾಡುವ ಪಾಕಿಸ್ತಾನ ತನ್ನ ದೇಶದಲ್ಲಿ ಸಾವನ್ನಪ್ಪಿದ ಉಗ್ರರಿಗೆ ರಾಷ್ಟ್ರ ಗೌರವ ನೀಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಬಲಿಯಾದ ಉಗ್ರರಿಗೂ ಈ ರೀತಿ ರಾಷ್ಟ್ರಧ್ವಜ ಹೊದೆಸಿ ಮಣ್ಣು ಮಾಡಿತ್ತು.

ಇದೀಗ ನಿನ್ನೆಯಷ್ಟೇ ಅಜ್ಞಾತ ಶೂಟರ್ ನಿಂದ ಹತ್ಯೆಯಾದ ಉಗ್ರ ಸೈಫುಲ್ಲಾನಿಗೂ ಪಾಕಿಸ್ತಾನದ ರಾಷ್ಟ್ರಧ್ವಜ ಹೊದೆಸಿ ಗೌರವ ನೀಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಮೂಲಕ ಉಗ್ರರ ಪೋಷಕ ಎಂದು ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನ ಮುಂದೆ ತೋರಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ