Pakistan ಉಗ್ರರಿಗೆ ಶುರುವಾಯ್ತು ಅಜ್ಞಾತ ಶೂಟರ್ ಭಯ

Krishnaveni K

ಸೋಮವಾರ, 19 ಮೇ 2025 (10:45 IST)
Photo Credit: X
ನವದೆಹಲಿ: ಪಾಕಿಸ್ತಾನ ಗಡಿಯಲ್ಲಿರುವ ಉಗ್ರರನ್ನು ಭಾರತೀಯ ಸೇನೆ ಬೆಂಡೆತ್ತುತ್ತಿದ್ದರೆ ಈಗ ಪಾಕಿಸ್ತಾನದೊಳಗಿನ ಭಯೋತ್ಪಾದಕರಿಗೆ ಅಜ್ಞಾತ ಶೂಟರ್ ಭಯ ಶುರುವಾಗಿದೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದಾಗಿನಿಂದ ಭಾರತೀಯ ಸೇನೆ ಪಾಕಿಸ್ತಾನ ಗಡಿಯಲ್ಲಿ ಸಂಹಾರ ಮಾಡುತ್ತಿದೆ. ಉಗ್ರರ ಅಡಗುದಾಣಗಳು, ಮನೆಗಳನ್ನು ಉಡೀಸ್ ಮಾಡುತ್ತಿವೆ. ಆಪರೇಷನ್ ಸಿಂಧೂರ್ ಮೂಲಕ ನೂರಾರು ಉಗ್ರರನ್ನು ಮಟ್ಟ ಹಾಕಿದೆ.

ಇದರ ನಡುವೆಯೇ ಈಗ ಪಾಕಿಸ್ತಾನದೊಳಗಿರುವ ಉಗ್ರರ ನಾಯಕರಿಗೆ ಅಜ್ಞಾತ ಶೂಟರ್ ಭಯ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಅಜ್ಞಾತ ಶೂಟರ್ ಈಗ ಮತ್ತೆ ತನ್ನ ಕೆಲಸ ಶುರು ಮಾಡಿದ್ದಾರೆ. ನಿನ್ನೆ ಬೆಂಗಳೂರಿನ ಐಐಎಸ್ ಸಿ ಮೇಲಿನ ಉಗ್ರ ದಾಳಿಯ ರೂವಾರಿ ಸೈಫುಲ್ಲಾ ಖಾಲಿದ್ ನನ್ನು ಅಜ್ಞಾತ ಶೂಟರ್ ಹತ್ಯೆ ಮಾಡಿದ್ದಾನೆ.

ಅಜ್ಞಾತ ಶೂಟರ್ ಈಗಾಗಲೇ ಸಾಕಷ್ಟು ಪ್ರಮುಖ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಹತ್ಯೆ ಮಾಡಿದವರು ಯಾರು, ಎಲ್ಲಿಂದ ಬಂದವರು ಎಂಬುದು ಇನ್ನೂ ನಿಗೂಢ. ಹೀಗಾಗಿ ಈಗ ಪಾಕಿಸ್ತಾನದೊಳಗಿನ ಉಗ್ರ ನಾಯಕರಿಗೆ ಭೀತಿ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ