ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಭಾರತ ಸಾಕ್ಷ್ಯ ನೀಡಬೇಕು ಎಂದ ಪಾಕಿಸ್ತಾನ ಪ್ರಧಾನಿ
ಬುಧವಾರ, 20 ಫೆಬ್ರವರಿ 2019 (06:54 IST)
ಪಾಕಿಸ್ತಾನ : ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆಭಾರತ ಸರಿಯಾದ ಸಾಕ್ಷ್ಯ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಅವಂತಿಪುರ್ -ಪುಲ್ವಾನ ಮಾರ್ಗ ಮಧ್ಯದಲ್ಲಿ ಸಾಗುತ್ತಿದ್ದ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಘಟನೆಯಲ್ಲಿ 44 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ತಿಳಿಸಿದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪುಲ್ವಾಮಾ ದಾಳಿಯ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದರೆ ಭಾರತ ನಮಗೆ ಸಾಕ್ಷಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.
‘ನಾವು ಸಹ ಉಗ್ರರಿಂದ ಸಂತ್ರಸ್ತರಾಗಿದ್ದೇವೆ. ಯಾರೂ ಹಿಂಸೆಗೆ ಪ್ರಚೋದನೆ ನೀಡುತ್ತಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಆದರೆ ದಾಳಿಯ ಬಗ್ಗೆ ನಮಗೆ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ. ಭಾರತ ಸರ್ಕಾರ ಒಂದೊಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಕೂಡ ಸುಮ್ಮನೆ ಕೂರುವುದಿಲ್ಲ. ಪ್ರತಿದಾಳಿ ನಡೆಸಲು ನಮಗೆ ಬರುತ್ತದೆ. ಆದರೆ ಈ ವಿಚಾರ ಮಾತುಕತೆಯಲ್ಲಿ ಬಗೆ ಹರಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.