ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್

ಮಂಗಳವಾರ, 19 ಫೆಬ್ರವರಿ 2019 (11:18 IST)
ಚೆನ್ನೈ : ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸೈನಿಕರು ಕಾಶ್ಮೀರಕ್ಕೆ ತೆರಳೋದೇ ಸಾಯುವುದಕ್ಕೆ ಎಂದು ಬಹುಭಾಷಾ ನಟ, ರಾಜಕಾರಣಿ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು,’ ಲೈನ್ ಆಫ್ ಕಂಟ್ರೋಲ್‍ನಲ್ಲಿ ಇದ್ದರೆ ಒಬ್ಬ ಸೈನಿಕ ಕೂಡ ಹುತಾತ್ಮರಾಗುವುದಿಲ್ಲ. ಸೈನ್ಯವನ್ನು ಗಡಿ ರೇಖೆ ದಾಟಿ ಮುಂದೆ ಹೋಗುವಂತೆ ಮಾಡುವುದು ಸರಿಯಲ್ಲ. ಜಗತ್ತು ಬದಲಾಗಿದೆ. ನಮ್ಮ ಸೈನ್ಯ ಇನ್ನೂ ಯಾಕೆ ಬದಲಾಗುತ್ತಿಲ್ಲ’ ಎಂದು ಹೇಳಿದ್ದಾರೆ.


ಹಾಗೇ ಇದೇ ವೇಳೆ ಅವರು ಮಾತನಾಡುತ್ತ ಕಾಶ್ಮೀರ ವಿಚಾರವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಸರ್ಕಾರ ಯಾಕೆ ಭಯಪಡ್ತಿದೆ? ಅಂತ ಪ್ರಶ್ನೆ ಮಾಡಿದ್ದಾರೆ.


ಭಾರತ ಉಳಿದ ಎಲ್ಲ ರಾಷ್ಟ್ರಗಳಿಗಿಂತ ಅತ್ಯುತ್ತಮವೆಂದು ತರಿಸಬೇಕಿದೆ ಎನ್ನುವ ಮೂಲಕ ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಕೈಬಿಡುವಂತೆ ಹೇಳಿರುವ ಈ ಮಾತು ವಿವಾದಕ್ಕೆ ಕಾರಣವಾಗಿದ್ದು, ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಎಲ್ಲಾ ಕಡೆ ಕಮಲ್ ಹಾಸನ್ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ